ಕುರುಗೋಡಿನ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಹಮ್ಮಿಕೊಂಡಿದ್ದ ಆರೋಗ್ಯ ಉಚಿತ ತಪಾಸಣೆ ಶಿಬಿರದಲ್ಲಿ ಡಾ.ರೂಪಾ ಜಾಲಿಹಾಳ್ ಅವರು ಮಗುವಿಗೆ ಲಸಿಕೆ ಹಾಕಿದರು. ಪ್ರಮುಖರಾದ ನೀಲಾವತಿ, ದೇವರಾಜ್, ತಿಮೋತಿ, ಸೈಯದ್ ಸುಲ್ತಾನ್, ಅಬ್ದುಲ್ ಸುಭಾನ್ ಇದ್ದರು. 
ಜಿಲ್ಲೆ

ಸಾತ್ವಿಕ ಆಹಾರ ಪದ್ಧತಿ ರೂಢಿಸಿಕೊಳ್ಳಿ

ನರೇಶ್ ಕುಮಾರ್

ಕುರುಗೋಡು: ವಿಶ್ವ ರಕ್ತದೊತ್ತಡ ದಿನಾಚರಣೆ ಅಂಗವಾಗಿ ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಆರೋಗ್ಯ ಉಚಿತ ತಪಾಸಣೆ ಶಿಬಿರ ಏರ್ಪಡಿಸಲಾಗಿತ್ತು.

ಜಿಲ್ಲಾ ಅಸಾಂಕ್ರಾಮಿಕ ರೋಗಗಳ ಸರ್ವೇಕ್ಷಣಾಧಿಕಾರಿ ಡಾ.ಮರಿಯಂಬಿ ಮಾತನಾಡಿ, ಪ್ರಸ್ತುತ ಪ್ರತಿಯೊಬ್ಬರೂ ಒತ್ತಡದಲ್ಲಿ ಜೀವನ ನಡೆಸುತ್ತಿದ್ದು, ರಕ್ತದೊತ್ತಡ ಕಾಯಿಲೆ ಸಾಮಾನ್ಯವಾಗಿದೆ. ಕಾಲಕಾಲಕ್ಕೆ ತಪಾಸಣೆ, ನಿಗದಿತ ವ್ಯಾಯಾಮ, ಸಾತ್ವಿಕ ಆಹಾರ ಪದ್ಧತಿ ರೂಢಿಸಿಕೊಂಡರೆ ರಕ್ತದೊತ್ತಡ ನಿಯಂತ್ರದಲ್ಲಿಡಬಹುದು ಎಂದರು.

ರಕ್ತದೊತ್ತಡ, ಮಧುಮೇಹ, ಐಸಿಟಿಸಿ ಆಪ್ತ ಸಮಾಲೋಚನೆ, ನೇತ್ರ ಮತ್ತು ದಂತ ಆರೋಗ್ಯ ತಪಾಸಣೆ ಮಾಡಲಾಯಿತು. ವೈದ್ಯಾಧಿಕಾರಿ ಡಾ.ರೂಪಾ ಜಾಲಿಹಾಳ್, ವೈದ್ಯರಾದ ಗಾಯಿತ್ರಿ, ಹಾರಿಕಾ, ಪಲ್ಲವಿ ಅವರು 256 ರೋಗಿಗಳ ಆರೋಗ್ಯ ತಪಾಸಣೆ ಮಾಡಿ ಔಷಧ ವಿತರಿಸಿದರು. ಸಿಎಚ್‌ಸಿ ಸಿಬ್ಬಂದಿ ಶೇಖರ್, ನೇತ್ರಾವತಿ, ಕರಿಬಸವ ಮತ್ತು ಮೆಹಬೂಬ್‌ಬಾಷಾ ಇದ್ದರು.