ಸಾಲಿಗ್ರಾಮ: ಪಟ್ಟಣದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಜೆಡಿಎಸ್ ಬೆಂಬಲಿತ ಅಭ್ಯರ್ಥಿ ಸತೀಶ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಕರುಣ್ ಕುಮಾರ್ ರಾಜೀನಾಮೆ ನೀಡಿದ್ದರಿಂದ ತೆರವಾದ ಸ್ಥಾನಕ್ಕೆ ಸೋಮವಾರ ನಡೆದ ಚುನಾವಣಾ ಪ್ರಕ್ರಿಯೆಯಲ್ಲಿ ಸತೀಶ್ ಅವರನ್ನು ಹೊರತುಪಡಿಸಿ ಬೇರೆ ಯಾರೂ ನಾಮಪತ್ರ ಸಲ್ಲಿಸದ ಕಾರಣ ಅವಿರೋಧವಾಗಿ ಆಯ್ಕೆಯಾಗಿದ್ದಾರೆಂದು ಚುನಾವಣಾ ಅಧಿಕಾರಿಯಾಗಿದ್ದ ಸಹಕಾರ ಇಲಾಖೆ ಅಧಿಕಾರಿ ಗಿರೀಶ್ ಘೋಷಣೆ ಮಾಡಿದರು.
ಸಂಘದ ನಿರ್ದೇಶಕರಾದ ಎಸ್.ಬಿ.ಅಶೋಕ್, ಕರುಣ್ ಕುಮಾರ್, ಪಾಪಣ್ಣ, ಸತೀಶ್, ಮಹೇಶ್, ಅನಂತ, ಅಶ್ವಿನಿ, ಚಂದ್ರನಾಯಕ, ಜಯರಾಮು, ರುಕ್ಮಿಣಿಯಮ್ಮ, ಸಣ್ಣದೇವಮ್ಮ, ಸಿಇಒ ಸುರೇಶ, ಸಿಬ್ಬಂದಿ ಮಧು, ಶಶಿಕುಮಾರ್ ಭಾಗವಹಿಸಿದ್ದರು.
ಜಿಪಂ ಮಾಜಿ ಅಧ್ಯಕ್ಷ ಸಾ.ರಾ.ನಂದೀಶ್ ನೂತನ ಅಧ್ಯಕ್ಷರನ್ನು ಅಭಿನಂದಿಸಿ ಮಾತನಾಡಿ, ಎಲ್ಲ ನಿರ್ದೇಶಕರು ಒಮ್ಮತದ ಅಭಿಪ್ರಾಯದೊಂದಿಗೆ ಹಿರಿಯ ಮುಖಂಡರ ಸಲಹೆ ಸೂಚನೆಗಳಂತೆ ಅಧ್ಯಕ್ಷರನ್ನು ಆಯ್ಕೆ ಮಾಡಿರುವುದು ಒಳ್ಳೆಯ ಬೆಳವಣಿಗೆಯಾಗಿದೆ. ಇದೇ ಹಾದಿಯಲ್ಲಿ ಮುಂದಿನ ದಿನಗಳಲ್ಲಿಯೂ ಸಂಘದವರು ನಡೆದುಕೊಳ್ಳಬೇಕು. ನೂತನ ಅಧ್ಯಕ್ಷರು ಸಂಘದ ವತಿಯಿಂದ ರೈತರಿಗೆ ದೊರೆಯುವ ಸೌಲಭ್ಯಗಳನ್ನು ಸಕಾಲಕ್ಕೆ ದೊರಕುವಂತೆ ಮಾಡಬೇಕು. ಆ ಮೂಲಕ ಸಂಘದ ಸದಸ್ಯರಿಗೆ ಪ್ರಾಮಾಣಿಕ ಸೇವೆಯನ್ನು ಕಲ್ಪಿಸಿ ಕೊಡುವುದರ ಮೂಲಕ ಸಂಘದ ಬೆಳವಣಿಗೆಗೆ ಶ್ರಮಿಸಬೇಕು ಎಂದರು.
ನೂತನ ಅಧ್ಯಕ್ಷರನ್ನು ಬೆಂಬಲಿಗರು ಹಾಗೂ ಮುಖಂಡರು ಅಭಿನಂದಿಸಿ, ಪಟಾಕಿ ಸಿಡಿಸಿ, ಸಿಹಿ ವಿತರಿಸಿ ಸಂಭ್ರಮಿಸಿದರು. ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಅಧ್ಯಕ್ಷ ಎಸ್.ಕೆ.ಮಧುಚಂದ್ರ, ತಾಲೂಕು ಜೆಡಿಎಸ್ ಅಧ್ಯಕ್ಷ ರಾಜಣ್ಣ, ಎಪಿಎಂಸಿ ಮಾಜಿ ಅಧ್ಯಕ್ಷ ಕುಪ್ಪಳ್ಳಿ ಸೋಮಶೇಖರ್, ಗ್ರಾಪಂ ಮಾಜಿ ಅಧ್ಯಕ್ಷ ಎಸ್.ಆರ್.ಪ್ರಕಾಶ್, ಪುರುಷೋತ್ತಮ್, ಸದಸ್ಯರಾದ ಗಂಗಾಧರ್, ಹರೀಶ್, ಸೋಮು, ಮಾಜಿ ಸದಸ್ಯರಾದ ಅಯಾಜ್ ಅಹ್ಮದ್, ಸುರೇಶ್, ಅಂಕನಹಳ್ಳಿ ಗ್ರಾಪಂ ಅಧ್ಯಕ್ಷ ಬಾಬ, ಜಗದೀಶ್, ಮಂಜುನಾಥ್, ಸಾ.ರಾ.ಸತೀಶ್ ನಟರಾಜ್, ಕುಮಾರ್, ಲಾಲು ಸಾಹೇಬ್, ತಿಮ್ಮೇಗೌಡ, ಮಹೇಂದ್ರ, ವಸಂತ, ಶಿವು ಸ್ವಾಮಿ, ಮಧು, ಪ್ರಕಾಶ್, ಹೋಟೆಲ್ ರಾಮಣ್ಣ ಇದ್ದರು.