ಕಲಬುರಗಿ : ನಗರದ ಔಷಧ ವ್ಯಾಪಾರಿಗಳಾಗಿದ್ದ ಸತೀಶ ಸೊಪ್ಪನಗೌಡ ಪಾಟೀಲ್ (೫೨) ಗುರುವಾರ ತೀವ್ರ ಹೃದಯಾಘಾತಕ್ಕೊಳಗಾಗಿ ನಿಧನರಾದರು. ತಂದೆ, ತಾಯಿ, ಪತ್ನಿ, ಇಬ್ಬರು ಪುತ್ರಿಯರು, ಪುತ್ರ ಸೇರಿದಂತೆ ಬಂಧು ಬಳಗ ಅಗಲಿದ್ದಾರೆ. ಖ್ಯಾತ ಹೋಮಿಯೋಪಥಿಕ್ ವೈದ್ಯರಾಗಿರುವ ಕೆಪಿಸಿಸಿ ವೈದ್ಯಕೀಯ ವಿಭಾಗದ ಸಂಚಾಲಕರಾಗಿರುವ ಡಾ.ಎಸ್.ಎಸ್.ಪಾಟೀಲ್ ಅವರ ಹಿರಿಯ ಸಹೋದರ. ಸ್ವಗ್ರಾಮ ಜೇವರ್ಗಿ ತಾಲೂಕಿನ ಮಂದರವಾಡ ಗ್ರಾಮದಲ್ಲಿರುವ ಸ್ವಂತ ಹೊಲದಲ್ಲಿ ಶುಕ್ರವಾರ ಬೆಳಗ್ಗೆ ೧೧ ಗಂಟೆಗೆ ಅಂತ್ಯಕ್ರಿಯೆ ನೆರವೇರಿಸಲಾಗುತ್ತದೆ.