ಕೆ.ಆರ್.ಸಾಗರ ಬೃಂದಾವನದಲ್ಲಿ ಪ್ರವಾಸಿಗರನ್ನು ಆಕರ್ಷಿಸಿದ ಇಂದೂ ನಾಗರಾಜು ಮತ್ತು ಹೇಮಂತ್ ಸಂಗೀತ ಸಂಜೆ ಕಾರ್ಯಕ್ರಮ. 
ಜಿಲ್ಲೆ

ಮನಸೂರೆಗೊಂಡ ಇಂದು ನಾಗರಾಜು, ಹೇಮಂತ್ ಗಾಯನ

ರವಿಕುಮಾರ್ ಪಿ. ಕೆ

ಕೆ.ಆರ್.ಸಾಗರ: ಇಲ್ಲಿನ ದಕ್ಷಿಣ ಬೃಂದಾವನದಲ್ಲಿ ಸೋಮವಾರ ಕಾವೇರಿ ನೀರಾವರಿ ನಿಗಮದ ವತಿಯಿಂದ ಆಯೋಜಿಸಿದ್ದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಇಂದೂ ನಾಗರಾಜು ಮತ್ತು ಹೇಮಂತ್ ತಂಡದ ಗಾಯನಕ್ಕೆ ಪ್ರವಾಸಿಗರು ಹುಚ್ಚೆದು ಕುಣಿದರು.

ಪುನೀತ್, ವಿಷ್ಟುವರ್ಧನ್, ಅಂಬರೀಷ್ ಚಿತ್ರಗಳ ಹಾಡುಗಳು ಮನಸೂರೆಗೊಂಡವು. ಬೆಂಗಳೂರು ಮೂಲದ ಭರತ್ ಬೆಂಕಿ ಹಚ್ಚಿದ ಕೋಲು ಹಿಡಿದು ವಿವಿಧ ಭಂಗಿಗಳ ಪ್ರದರ್ಶನ ರೋಮಾಂಚನಗೊಳಿಸಿತು.

ಸಂಗೀತ ಕಾರಂಜಿ ವೀಕ್ಷಿಸಿದ ಗಣ್ಯರು: ನವೀಕರಣಗೊಂಡ ಸಂಗೀತ ಕಾರಂಜಿಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಪತ್ನಿ ಪಾರ್ವತಿ, ಮೀನುಗಾರಿಕೆ ಸಚಿವ ಮಂಕಾಳ ವೈದ್ಯ, ನ್ಯಾಯಾಧೀಶರ ತಂಡ ಹಾಗೂ ಅನೇಕ ಗಣ್ಯರು ಬೃಂದಾವನದ ದೀಪಾಲಂಕರ ಮತ್ತು ಉತ್ತರ ಬೃಂದಾವನಲ್ಲಿರುವ ಸಂಗೀತ ಕಾರಂಜಿ ವೀಕ್ಷಣೆ ಮಾಡಿ ಸಂತಸಪಟ್ಟರು.