ಜಿಲ್ಲೆ

'ಸತ್ಯದ ಮಹಿಮೆ' ಗ್ರಂಥ ಬಿಡುಗಡೆ; ಇದು ಡಾ.ಕೆ.ಜಿ.ಸುಬ್ರಾಯ ಶರ್ಮ ರಚನೆಯ 173 ಕೃತಿ

Bengaluru - General - Rama Kishan K V

ಬೆಂಗಳೂರು: ಬಸವನಗುಡಿಯ ಸಾಕಮ್ಮ ಗಾರ್ಡನ್ಸ್​ನಲ್ಲಿರುವ ವೇದಾಂತ ನಿಲಯದಲ್ಲಿ ಭಾನುವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಹಿರಿಯ ವೇದಾಂತ ವಿದ್ವಾಂಸ ಡಾ.ಕೆ.ಜಿ.ಸುಬ್ರಾಯ ಶರ್ಮ ಅವರ 'ಸತ್ಯದ ಮಹಿಮೆ' ಗ್ರಂಥ ಬಿಡುಗಡೆಗೊಂಡಿತು.

ಎಸ್​.ಆರ್​.ಪಾಂಡುರಂಗ ಕೃತಿ ಲೋಕಾರ್ಪಣೆ ಮಾಡಿದರು. ಕಾರ್ಯಕ್ರಮದಲ್ಲಿ ಜಿ.ರಾಮಕೃಷ್ಣ, ಪವನ್​ ಕುಮಾರ್​ ದೇಶ್​ ಕುಲಕರ್ಣಿ, ಕೆ.ವಿ.ಶ್ರೀನಿವಾಸ ಮೂರ್ತಿ, ಪವನ್​ ಕುಮಾರ್​ ದೇಶ್​ ಕುಲಕರ್ಣಿ, ಎಂ.ಎನ್​.ಶ್ರೀರಾಮ್​, ಡಾ.ಕೆ.ಜಿ.ಸುಬ್ರಾಯ ಶರ್ಮ ದಂಪತಿ ಇದ್ದರು.

'ಸತ್ಯದ ಮಹಿಮೆ' ಡಾ.ಕೆ.ಜಿ.ಸುಬ್ರಾಯ ಶರ್ಮ ರಚನೆಯ 173ನೇ ಕೃತಿಯಾಗಿದೆ. ಸತ್ಯಂ ಜ್ಞಾನಮನಂತಂ ಬ್ರಹ್ಮ, ಶ್ರೀರಾಮನ ಸತ್ಯಸಂಧತೆ, ಸತ್ಯಮೂಲಾನಿ ಸರ್ವಾಣಿ, ಅಮರಕೋಶದಲ್ಲಿ ಸತ್ಯ, ಸುಭಾಷಿತಗಳಲ್ಲಿ ಸತ್ಯ, ಸತ್ಯದಿಂದ ಆತ್ಮದರ್ಶನ ಮುಂತಾದ ವಿಷಯಗಳನ್ನು ಉಲ್ಲೇಖಿಸಿ ಗ್ರಂಥ ರಚಿಸಿದ್ದಾರೆ.