ಮಂಗಳೂರು : ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತೆತ್ತಿದರೆ ಅನ್ನಭಾಗ್ಯ, ಗೃಹಲಕ್ಷ್ಮಿ , ಉಚಿತ ವಿದ್ಯುತ್ ನೀಡಿದ್ದೇವೆ ಎನ್ನುತ್ತಾರೆ.
ಆದರೆ ರಾಜ್ಯದಲ್ಲಿ ಅನ್ನಭಾಗ್ಯದ ಅಕ್ಕಿ ಸರಬರಾಜು ಮಾಡುವ ಲಾರಿ ಮಾಲೀಕರಿಗೆ 260 ಕೋಟಿ ರೂ.ಬಾಕಿ ಇರಿಸಿದ್ದಾರೆ. ಕೇಂದ್ರ ಸರ್ಕಾರದ ಪ್ರಧಾನ ಮತ್ತು ಗರೀಬಿ ಕಲ್ಯಾಣ ಅನ್ನ ಯೋಜನೆಯಿಂದ ಅಕ್ಕಿ ಬರುತ್ತಿದೆ. ಅದರಲ್ಲೂ ಸಾಗಾಟದ ಹಣ ಕೊಡಲು ದಿವಾಳಿ ರಾಜ್ಯ ಸರ್ಕಾರಕ್ಕೆ ಸರ್ಕಾರಕ್ಕೆ ಗತಿಯಿಲ್ಲ ಎಂದು ದ.ಕ.ಜಿಲ್ಲಾ ಬಿಜೆಪಿ ಅಧ್ಯಕ್ಷ ಸತೀಶ್ ಕುಂಪಲ ಟೀಕಿಸಿದ್ದಾರೆ.
ಗೃಹಲಕ್ಷ್ಮಿಗೆ ಹಣ ಬಾರದೆ ಐದಾರು ತಿಂಗಳು ಆಗಿದೆ. ಉಚಿತ ಉಚಿತ ಎಂದು ಎಂದು ವಿದ್ಯುತ್ ದರ ದುಪ್ಪಟ್ಟಾಗಿದೆ. ಸಂವೇದನ ರಹಿತ ಸರ್ಕಾರ, ದುಡಿಯುವ ವರ್ಗದವರನ್ನು ಕೊಳ್ಳೆ ಹೊಡೆಯುವ ಸರ್ಕಾರ ಕರ್ನಾಟಕದಲ್ಲಿ ಆಡಳಿತ ನಡೆಸುತ್ತಿದೆ. ಸರ್ಕಾರ ಕೂಡಲೇ ಲಾರಿ ಮಾಲೀಕರಿಗೆ ಬಾಕಿ ಇರುವ ಹಣವನ್ನು ಬಿಡುಗಡೆ ಗೊಳಿಸಬೇಕೆಂದು ಕುಂಪಲ ಆಗ್ರಹಿಸಿದ್ದಾರೆ.
..................................