ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯ ಶಾಲಾ ಮೈದಾನದಲ್ಲಿ ಧಾರ್ಮಿಕ ಆಚರಣೆಗೆ ನಿಷೇಧ ವಿಧಿಸಿರುವ ಕಾಂಗ್ರೆಸ್ ಸರ್ಕಾರದ ಕ್ರಮ ಹಿಂದುಗಳ ಹಬ್ಬಗಳನ್ನು ಗಮನದಲ್ಲಿರಿಸಿ ಮಾಡಿರುವ ನಿರ್ಧಾರ ಎನ್ನುವುದರಲ್ಲಿ ಸಂಶಯವಿಲ್ಲ ಎಂದು ದ.ಕ.ಜಿಲ್ಲಾ ಬಿಜೆಪಿ ಅಧ್ಯಕ್ಷ
ಸತೀಶ್ ಕುಂಪಲ ಹೇಳಿದ್ದಾರೆ.
ರಾಜ್ಯದಲ್ಲಿ ಪದೇಪದೇ ಹಿಂದುಗಳ ಭಾವನೆಗಳಿಗೆ ದಕ್ಕೆ ತರುವಂತಹ ಘಟನೆಗಳು ನಡೆಯುತ್ತಿರುವುದು ಖಂಡನೀಯ. ಕಾಂಗ್ರೆಸ್ ಸರ್ಕಾರದ ತುಷ್ಠೀಕರಣ ವ್ಯಾಮೋಹಕ್ಕೆ ಹಿಂದುಗಳು ಬಲಿಯಾಗುತ್ತಿದ್ದಾರೆ. ಹಿಂದು ಧರ್ಮದ ಹಬ್ಬಗಳಲ್ಲಿ ಭಾರತೀಯತೆಯ ಸಂಸ್ಕೃತಿಗಳು ಅಡಕವಾಗಿದೆ ಎನ್ನುವುದನ್ನು ಶಿಕ್ಷಣ ಇಲಾಖೆ ಅರಿಯಬೇಕು. ಸರ್ಕಾರ ತಕ್ಷಣ ಈ ಸುತ್ತೋಲೆಯನ್ನು ರದ್ದುಪಡಿಸಬೇಕೆಂದು ಅವರು ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ.