ಮಂಗಳೂರು : ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬಂದ ಬಳಿಕ ನಿರಂತರವಾಗಿ ಹಿಂದು ನಾಯಕರು ಹಾಗೂ ಕಾರ್ಯಕರ್ತರ ಮೇಲೆ ದಾಳಿಯಾಗುತ್ತಿದೆ. ಕಾನೂನು ಸುವ್ಯವಸ್ಥಿತೆಗೆ ಭಂಗ ತರುವ ಕೆಲಸ ಅವ್ಯಾಹತವಾಗಿ ಕಿಡಿಗೇಡಿಗಳು ನಡೆಸುತ್ತಿದ್ದಾರೆ. ಸರ್ಕಾರ ಕ್ರಿಮಿನಲ್ಗಳನ್ನು ಮತ್ತು ಮತಾಂಧರನ್ನು ಮಟ್ಟ ಹಾಕಬೇಕು. ಅದು ಸಾಧ್ಯವಿಲ್ಲವಾದರೆ ಅಧಿಕಾರದಿಂದ ಕೆಳಗಿಳಿಯಬೇಕು ಎಂದು ದ.ಕ.ಜಿಲ್ಲಾ ಬಿಜೆಪಿ ಅಧ್ಯಕ್ಷ ಸತೀಶ್ ಕುಂಪಲ ಆಗ್ರಹಿಸಿದ್ದಾರೆ.
ನಾಗಮಂಗಲದಲ್ಲಿ ಗಣೇಶೋತ್ಸವ ಮೆರವಣಿಗೆ ಮೇಲೆ ಮತಾಂಧರು ದಾಳಿ ಮಾಡಿದ ದುಷ್ಕೃತ್ಯದ ವಿರುದ್ಧ ನಡೆದ ಪ್ರತಿಭಟನಾ ಸಭೆಯಲ್ಲಿ ಹಿಂದು ನಾಯಕ ಶರಣ್ ಪಂಪ್‌ವೆಲ್ ಘಟನೆಯನ್ನು ಖಂಡಿಸಿ ಮಾತನಾಡಿದ್ದಾರೆ. ಇದನ್ನೇ ನೆಪವಾಗಿರಿಸಿ ಕಾಂಗ್ರೆಸ್ ಜನಪ್ರತಿನಿಧಿಯಾಗಿದ್ದ ಓರ್ವ ಗೂಂಡಾ ರೀತಿಯಲ್ಲಿ ಧ್ವನಿ ಮೆಸೇಜ್ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಬೆದರಿಕೆ ಒಡ್ಡುವ ಪ್ರಯತ್ನ ನಡೆಸಿದ್ದಾನೆ. ಇಂತಹ ಕೀಳು ವರ್ತನೆಯನ್ನು ಬಿಜೆಪಿ ಸಹಿಸುವುದಿಲ್ಲ ಎಂದು ಅವರು ಹೇಳಿದ್ದಾರೆ.
ಪಿಎಫ್‌ಐ ನಿಷೇಧ ಬಳಿಕ ಅದರ ಸದಸ್ಯರು ಕಾಂಗ್ರೆಸ್ ಸೇರಿದಂತೆ ಬಿ.ಸಿ.ರೋಡ್‌ನ ಧ್ವನಿ ಮೆಸೇಜ್ ತಿಳಿಸುತ್ತಿದೆ. ಹಿಂದುಗಳು ಮತ್ತು ಹಿಂದು ಸಂಘಟನೆ ಗಳು ಯಾವತ್ತೂ ಅನ್ಯ ಮತೀಯರ ಧಾರ್ಮಿಕ ಕಾರ್ಯಕ್ರಮಗಳನ್ನು ಗೌರವಿಸಿದ್ದಾರೆ. ಆದರೆ ಹಿಂದು ಧಾರ್ಮಿಕ
ಕಾರ್ಯಕ್ರಮಗಳ ಮೇಲೆ ದಾಳಿಯಾದಾಗ ರಕ್ಷಿಸುವ ಜವಾಬ್ದಾರಿ ನಿರ್ವಹಿಸಿದೆ . ಕಾಂಗ್ರೆಸ್‌ನ ಓಲೈಕೆ ನೀತಿಯಿಂದ ಇಂತಹ ಘಟನೆಗಳು ನಡೆಯುತ್ತಿವೆ. ಮತಾಂಧರನ್ನು ಮಟ್ಟ ಹಾಕುವ ಜಿಲ್ಲಾ ಪೊಲೀಸ್ ತಮ್ಮ ದಕ್ಷತೆಯನ್ನು ತೋರಬೇಕೆಂದು ಸತೀಶ ಕುಂಪಲ ಒತ್ತಾಯಿಸಿದ್ದಾರೆ.
.........................