: ನರಗುಂದ ತಾಲೂಕಿನ ಚಿಕ್ಕನರಗುಂದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಅಧ್ಯಕ್ಷ ಶಿವಾನಂದ ಸಾತಣ್ಣವರ, ಉಪಾಧ್ಯಕ್ಷೆ, ಯಲ್ಲವ್ವ ಮುದಿಗೌಡ್ರ ಹಾಗೂ ನಿರ್ದೇಶಕ ಮಂಡಳಿ ಸದಸ್ಯರನ್ನು ಸೋಮವಾರ ಸನ್ಮಾನಿಸಲಾಯಿತು. ಪ್ರಕಾಶ ನವಲಗುಂದ, ಅಶೋಕ ಜ್ಞಾನೋಪಂಥ, ಎಂ.ವೈ. ಬಾಚಿ, ಇತರರಿದ್ದರು. 
ಜಿಲ್ಲೆ

ಚಿಕ್ಕನರಗುಂದ ಪಿಎಸಿಎಸ್‌ಗೆ ಸಾತಣ್ಣವರ ಅಧ್ಯಕ್ಷ

ನರಗುಂದ: ತಾಲೂಕಿನ ಚಿಕ್ಕನರಗುಂದ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ (ಪಿಎಸಿಎಸ್) ನೂತನ ಅಧ್ಯಕ್ಷರಾಗಿ ಶಿವಾನಂದ ಸಾತಣ್ಣವರ, ಉಪಾಧ್ಯಕ್ಷರಾಗಿ ಯಲ್ಲವ್ವ ಮುದಿಗೌಡ್ರ ಸೋಮವಾರ ಅವಿರೋಧವಾಗಿ ಆಯ್ಕೆಯಾದರು.

ನಿರ್ದೇಶಕ ಮಂಡಳಿಗೆ ಸದಸ್ಯರಾಗಿ ಮಲ್ಲನಗೌಡ ಚನ್ನಬಸನಗೌಡ್ರ, ಅಶೋಕ ಸಾಲೂಟಗಿ, ಈರಪ್ಪ ಹಳೇಮನಿ, ಶರಣಯ್ಯ ಕುಲಕರ್ಣಿ, ಹನುಮಂತಪ್ಪ ಬಾಚಿ, ವಿರೂಪಾಕ್ಷಪ್ಪ ಯರಗಟ್ಟಿ, ಸುಮಿತ್ರಾ ತೊರಗಲ್‌ಲ್, ಬಸಪ್ಪ ತಳವಾರ, ನೀಲವ್ವ ನರಸನ್ನವರ, ಮಲ್ಲಪ್ಪ ಚಲವಾದಿ ಇತ್ತೀಚೆಗೆ ಅವಿರೋಧವಾಗಿ ಆಯ್ಕೆಯಾಗಿದ್ದರು. ರುದ್ರಗೌಡ ರಾಚನಗೌಡ್ರ, ಅಶೋಕ ಜ್ಞಾನೋಪಂಥ, ರಾಚನಗೌಡ ಮುದಿಗೌಡ್ರ, ಎಂ.ಜಿ. ಯರಗಟ್ಟಿ, ಎಂ.ವೈ. ಬಾಚಿ, ಎಂ.ಬಿ. ಹಿರೇಮಠ, ಚುನಾವಣಾ ಅಧಿಕಾರಿಯಾಗಿ ಪ್ರಕಾಶ ನವಲಗುಂದ ಇದ್ದರು.