ಹರಪನಹಳ್ಳಿ ತಾಲೂಕಿನ ಸಾಸ್ವಿಹಳ್ಳಿ ಗ್ರಾಪಂ ಅಧ್ಯಕ್ಷರಾಗಿ ಆಯ್ಕೆಯಾದ ಗೋಪಾಳಿ ಮಮತಾ ಅವರನ್ನು ಸನ್ಮಾನಿಸಲಾಯಿತು. ಸದಸ್ಯರಾದ ಹಾಲಮ್ಮ ಎಸ್, ಪಿ.ಮಂಜುನಾಥ, ಎಂ.ಸಿದ್ದಲಿಂಗಪ್ಪ, ರೇವಣಸಿದ್ದಪ್ಪ, ಟಿ.ಮುನೇಗೌಡ, ಟಿ.ಶ್ರುತಿ, ಕೆ.ನೀಲಮ್ಮ ಇತರರಿದ್ದರು. 
ಜಿಲ್ಲೆ

ಸಾಸ್ವಿಹಳ್ಳಿ ಗ್ರಾಮ ಪಂಚಾಯಿತಿಗೆ ಮಮತಾ ಅಧ್ಯಕ್ಷೆ

ಹರಪನಹಳ್ಳಿ: ತಾಲೂಕಿನ ಸಾಸ್ವಿಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ಗೋಪಾಳಿ ಮಮತಾ ಆಯ್ಕೆಯಾಗಿದ್ದಾರೆ.

ಅಧ್ಯಕ್ಷ ಸ್ಥಾನಕ್ಕೆ ಬಿಜೆಪಿ ಬೆಂಬಲಿತ ಗೋಪಾಳಿ ಮಮತಾ ಹಾಗೂ ಕಾಂಗ್ರೆಸ್ ಬೆಂಬಲಿತ ಎಸ್.ರತ್ನಮ್ಮ ಅವರು ಸ್ಪರ್ಧಿಸಿದ್ದರು. ಒಟ್ಟು 18 ಸದಸ್ಯರಲ್ಲಿ ಮಮತಾ 8 ಹಾಗೂ ರತ್ನಮ್ಮ 7 ಮತಗಳನ್ನು ಪಡೆದರು.

ಮೂರು ಮತಗಳು ನಿಷ್ಕ್ರಿಯವಾದ ಕಾರಣ ಬಿಜೆಪಿ ಬೆಂಬಲಿತ ಅಭ್ಯರ್ಥಿ ಕೇವಲ ಒಂದು ಮತದ ಅಂತರದಿಂದ ರೋಚಕ ಗೆಲುವು ಸಾಧಿಸಿದರು. ಸದಸ್ಯರಾದ ಹಾಲಮ್ಮ ಎಸ್, ಶಂಕರಗೌಡ ಎಚ್, ಅಂಜಿನಮ್ಮ ಯು, ಪಿ.ಮಂಜುನಾಥ, ಎಂ.ಸಿದ್ದಲಿಂಗಪ್ಪ, ರೇವಣಸಿದ್ದಪ್ಪ, ಟಿ.ಮುನೇಗೌಡ, ಟಿ.ಶ್ರುತಿ, ಕೆ.ನೀಲಮ್ಮ ಹಾಗೂ ಪ್ರಮುಖರಾದ ಎಸ್.ಎಚ್.ಬುಳ್ಳನಗೌಡ, ಯು.ಕೋಟೆಪ್ಪ, ಕೆ.ಬಸವರಾಜ, ಗಿರಿಯಾಪಳ ಮಂಜುನಾಥ, ಎಚ್.ಶಂಕರಗೌಡ, ಎಂ.ಪಿ. ಹಾಲೇಶ್, ಬಸವರಾಜ, ಕೆ.ಜಿ. ಕೊಟ್ರೇಶ್ ಇತರರಿದ್ದರು. ಚುನಾವಣಾಧಿಕಾರಿಯಾಗಿ ತಹಶೀಲ್ದಾರ್ ಬಿ.ವಿ. ಗಿರೀಶ್ ಬಾಬು ಕಾರ್ಯನಿರ್ವಹಿಸಿದರು.