ಸಾಸ್ತಾನ ಪಾಂಡೇಶ್ವರ ಚಡಗರ ಅಗ್ರಹಾರದ ಶ್ರೀ ಮಹಿಷಮರ್ಧಿನಿ ಅಮ್ಮನವರ ಮತ್ತು ಶ್ರೀ ರಕ್ತೇಶ್ವರಿ ಅಮ್ಮನವರ ಸನ್ನಿಧಿಯಲ್ಲಿ ಶರನ್ನವರಾತ್ರಿ ಮಹೋತ್ಸವ ಚಂಡಿಕಾಯಾಗ ಸಂಪನ್ನವಾಯಿತು.  
ಜಿಲ್ಲೆ

ಸಾಸ್ತಾನ ದೇಗುಲ ಶರನ್ನವರಾತ್ರಿ ಸಂಪನ್ನ

ಇಂದಿರಾ ಎನ್ ಕೆ

ಕೋಟ: ಸಾಸ್ತಾನ ಪಾಂಡೇಶ್ವರ ಚಡಗರ ಅಗ್ರಹಾರದ ಶ್ರೀ ಮಹಿಷಮರ್ಧಿನಿ ಅಮ್ಮನವರ ಮತ್ತು ಶ್ರೀ ರಕ್ತೇಶ್ವರಿ ಅಮ್ಮನವರ ಸಾನ್ನಿಧ್ಯದಲ್ಲಿ ಶರನ್ನವರಾತ್ರಿ ಮಹೋತ್ಸವ ಶನಿವಾರ ಸಂಪನ್ನವಾಯಿತು.

ಸೇವಾಕರ್ತರಾದ ಪಿ.ಸಂದೀಪ್ ಚಡಗ ದಂಪತಿ ಸಂಕಲ್ಪ ಪೂಜೆ ನಡೆಸಿಕೊಟ್ಟರು. ತೀರ್ಥಬೈಲ್ ರಾಮಕೃಷ್ಣ ಅಡಿಗರ ನೇತೃತ್ವದಲ್ಲಿ ಚಂಡಿಕಾ ಹೋಮ ನೆರವೇರಿತು.ಸಂಘದ ಅಧ್ಯಕ್ಷ ಪಿ.ರಾಮಕೃಷ್ಣ ಚಡಗ, ಕಾರ್ಯದರ್ಶಿ ಗಣೇಶ ಚಡಗ, ಖಜಾಂಜಿ ಪಿ.ಚಂದ್ರಶೇಖರ ಚಡಗ, ಪಾಮರ ಚಡಗ ಉಪಸ್ಥಿತರಿದ್ದರು. ಚಡಗ ಕುಟುಂಬದ ಅತ್ಯಂತ ಹಿರಿಯರಾದ 92 ವರ್ಷದ ನಿವೃತ್ತ ಪೋಸ್ಟ್ ಮಾಸ್ಟರ್ ಪಿ.ಸದಾಶಿವ ಚಡಗ ಹೋಮದಲ್ಲಿ ಭಾಗಿಯಾಗಿದ್ದರು.