ಮಂಗಳೂರು: ನಾಗರ ಪಂಚಮಿ ಪ್ರಯುಕ್ತ ಸುರತ್ಕಲ್ ಸಸಿಹಿತ್ಲು ಬಂಗೇರ ಕುಟುಂಬಸ್ಥರ ನಾಗಮೂಲಸ್ಥಾನ ಸಾರಂತಾಯ ಗರೋಡಿಯಲ್ಲಿ ಮಂಗಳವಾರ ಹಾಲಿನ ಅಭಿಷೇಕ, ಸೀಯಾಳಾಭಿಷೇಕ ಮತ್ತು ನಾಗತಂಬಿಲ ನೆರವೇರಿತು.
ಪಟೇಲರಾದ ಕಾಂತು ಲಕ್ಕಣ ಯಾನೆ ಯಾದವ ಜಿ.ಬಂಗೇರ ಅವರು ನೇತೃತ್ವ ವಹಿಸಿದ್ದರು. ಸಮಿತಿ ಅಧ್ಯಕ್ಷ ಪದ್ಮನಾಭ ಬಂಗೇರ, ಕೋಶಾಧಿಕಾರಿ ಪ್ರಕಾಶ್ ಕೋಟ್ಯಾನ್ ಮುಂತಾದವರು ಉಪಸ್ಥಿತರಿದ್ದರು.