ಮಾನ್ವಿ ಪಟ್ಟಣದ ಪಟ್ಟಣದ ಬ್ರಾಹ್ಮಣವಾಡಿ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಬ್ಯಾಗ್ ಕಿಟ್ ಹಾಗೂ ವಯೋವೃದ್ಧರಿಗೆ ಸ್ಟಿಕ್ ವಿತರಣಾ ಕಾರ್ಯಕ್ರಮವನ್ನು ತಹಸೀಲ್ದಾರ್ ರಾಜು ಪಿರಂಗಿ ಕಾರ್ಯಕ್ರಮ ಉದ್ಘಾಟಿಸಿದರು. ಸರ್ವಧರ್ಮ ಸೇವಾ ವೆಲ್ಫೇರ್ ಟ್ರಸ್ಟ್ ಸಂಸ್ಥಾಪಕ ಹನುಮಂತ ಕೋಟೆ, ಗ್ರೇಡ್-2 ತಹಸೀಲ್ದಾರ್ ಅಬ್ದುಲ್ ವಾಹೀದ್, ಪತ್ರಕರ್ತ ಈರೇಶ ಹುಲುಗುಂಚಿ, ಮುಖಂಡರಾದ ಬಾಬುಲ್, ಸಬ್ಜಲಿಸಾಬ್, ಸಂತೋಷ ಶೇಠ್, ರವಿಕುಮಾರ ಇದ್ದರು. 
ಜಿಲ್ಲೆ

ಸಹಾಯದ ಮನೋಭಾವನೆ ಇರಲಿ

ಮಾನ್ವಿ: ಟ್ರಸ್ಟ್ ಬಡ ವಿದ್ಯಾರ್ಥಿಗಳಿಗೆ, ವಯೋವೃದ್ಧರಿಗೆ ಹಾಗೂ ಬಡವರಿಗೆ ಹಲವು ವರ್ಷಗಳಿಂದ ಸಹಾಯ ಮಾಡುತ್ತಿರುವುದು ಶ್ಲಾಘನೀಯ ಎಂದು ಗ್ರೇಡ್-2 ತಹಸೀಲ್ದಾರ್ ಅಬ್ದುಲ್ ವಾಹೀದ್ ಹೇಳಿದರು.

ಟ್ರಸ್ಟ್ ಕಾರ್ಯ ಶ್ಲಾಘನೀಯ

ಪಟ್ಟಣದ ಬ್ರಾಹ್ಮಣವಾಡಿಯ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಸ್ವಾತಂತ್ರೃ ದಿನಾಚರಣೆಯ ಅಂಗವಾಗಿ ಸರ್ವಧರ್ಮ ಸೇವಾ ವೆಲ್ಫೇರ್ ಟ್ರಸ್ಟ್ ಹಮ್ಮಿಕೊಂಡಿದ್ದ ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸದ ಸಾಮಾಗ್ರಿ ಕಿಟ್ ಹಾಗೂ ವಯೋವೃದ್ಧರಿಗೆ ಸ್ಟಿಕ್‌ನ್ನು ವಿತರಣಾ ಕಾರ್ಯಕ್ರಮದಲ್ಲಿ ಗುರುವಾರ ಮಾಡಿ ಮಾತನಾಡಿದರು. ಸಹಾಯದ ಮನೋಭಾವನೆಯನ್ನು ಎಲ್ಲರೂ ಬೆಳಸಿಕೊಳ್ಳಬೇಕು ಎಂದರು.