ಸಂಡೂರಿನಲ್ಲಿರುವ ಕೇಂದ್ರ ಸರ್ಕಾರದ ಕೆಐಓಸಿಎಲ್ (ಕುದುರೆಮುಖ) ಗಣಿ ಕಂಪನಿ ವ್ಯವಸ್ಥಾಪಕ ರಾಮಕೃಷ್ಣ ಕೋನಾರಿ ಅವರಿಗೆ ಕರವೇ (ನಾರಾಯಣಗೌಡ ಬಣ) ಕಾರ್ಯಕರ್ತರು ಸೋಮವಾರ ಮನವಿ ಸಲ್ಲಿಸಿದರು. ಉಪಾಧ್ಯಕ್ಷರಾದ ಪ್ರಕಾಶ, ಕಾರ್ಯಕರ್ತರಾದ ಗೋಪಾಲಸಿಂಧೆ, ಹಿರಿಯರಾದ ಸಿ.ಡಿ.ಭಾಸ್ಕರ್, ಕುಮಾರಸ್ವಾಮಿ, ವಕೀಲರಾದ ಭರಮರೆಡ್ಡಿ, ಪ್ರಕಾಶ್, ವಿನೋದ ಇತರರಿದ್ದರು. 
ಜಿಲ್ಲೆ

ಸರೋಜಿನಿ ಮಹಿಷಿ ವರದಿ ಪಾಲಿಸಿ

ರುದ್ರಪ್ಪ ವಾಲಿ

ಸಂಡೂರು: ಕೇಂದ್ರ ಸರ್ಕಾರದ ಕೆಐಓಸಿಎಲ್ (ಕುದುರೆಮುಖ) ಗಣಿ ಕಂಪನಿಯಲ್ಲಿ ಸ್ಥಳೀಯರಿಗೆ ಉದ್ಯೋಗ ಕಲ್ಪಿಸಿಕೊಡಬೇಕು ಎಂದು ಲಕ್ಷ್ಮೀಪುರದ ಯೋಜನಾ ಕಚೇರಿ ವ್ಯವಸ್ಥಾಪಕ ರಾಮಕೃಷ್ಣ ಕೋನಾರಿ ಅವರಿಗೆ ಕರವೇ ಕಾರ್ಯಕರ್ತರು ಸೋಮವಾರ ಮನವಿ ಸಲ್ಲಿಸಿದರು.

ನಂತರ ಮಾತನಾಡಿದ ತಾಲೂಕು ಅಧ್ಯಕ್ಷ ಸತ್ಯನಾರಾಯಣ ಮಾಸ್ತಿ, ಕಂಪನಿಯಲ್ಲಿ ನಡೆಯಲಿರುವ ಉದ್ಯೋಗ ನೇಮಕಾತಿಯಲ್ಲಿ ಸ್ಥಳೀಯರಿಗೆ ಪ್ರಥಮ ಆದ್ಯತೆ ನೀಡಬೇಕು.

ಸ್ಥಳೀಯರಿಗೆ ಉದ್ಯೋಗ ನೀಡಬೇಕೆಂಬ ಸರೋಜಿನಿ ಮಹಿಷಿ ವರದಿಯನ್ನು ತಪ್ಪದೆ ಪಾಲಿಸಬೇಕು ಎಂದರು.