ಜಿಲ್ಲೆ

ಬಾರಾ ಶಾಲೆಯಲ್ಲಿ ಸರ್ಗೋತ್ಸವ

ಸೌಮ್ಯ ಆರ್

ಕಾಸರಗೋಡು: ಬೇಕಲ ಶೈಕ್ಷಣಿಕ ಉಪಜಿಲ್ಲಾ ಶಾಲಾ ವಿದ್ಯಾರಂಗ ಕಲಾ ಸಾಹಿತ್ಯ ವೇದಿಕೆಯ ನೇತೃತ್ವದಲ್ಲಿ, ಸರ್ಗೋತ್ಸವಂ-24 ಕಾರ್ಯಕ್ರಮ ಬಾರಾ ಸರ್ಕಾರಿ ಪ್ರೌಢಶಾಲೆಯಲ್ಲಿ ಇತ್ತೀಚೆಗೆ ಜರುಗಿತು.

ಶಾಸಕ ಸಿ.ಎಚ್.ಕುಞಂಬು ಸಮಾರಂಭ ಉದ್ಘಾಟಿಸಿದರು. ಸಾಹಿತಿ, ಸಾಮಾಜಿಕ ಹೋರಾಟಗಾರ ಅಂಬಿಕಾಸುತನ್ ಮಾಙೌಡ್ ಭಾಗವಹಿಸಿದ್ದರು. ಉದುಮ ಗ್ರಾಪಂ ಅಧ್ಯಕ್ಷೆ ಲಕ್ಷ್ಮೀ ಅಧ್ಯಕ್ಷತೆ ವಹಿಸಿದ್ದರು. ಶಾಲಾ ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷ ಎಂ.ಕೆ.ವಿಜಯನ್, ಸನಿಲ್, ದೀಪಾ ಬಾಲಕೃಷ್ಣನ್, ಶ್ರೀಕುಮಾರ್ ಉಪಸ್ಥಿತರಿದ್ದರು. ಮುಖ್ಯಶಿಕ್ಷಕ ಕೆ.ಶಂಕರನ್ ಸ್ವಾಗತಿಸಿದರು. ವಿದ್ಯಾರಂಗ ಉಪಜಿಲ್ಲಾ ಸಂಚಾಲಕಿ ರಮಾದೇವಿ ವಂದಿಸಿದರು.