ವಿಜಯವಾಣಿ ಸುದ್ದಿಜಾಲ ನೆಲಮಂಗಲ
ವಿಜಯವಾಣಿ ಪತ್ರಿಕೆ ಮಹಿಳೆಯರಿಗೆ ಸ್ಪರ್ಧಾ ಮನೋಭಾವದ ಜತೆಗೆ ದಿನಪ್ರತಿಕೆ ಓದುವ ಹವ್ಯಾಸ ಬೆಳೆಸುತ್ತಿರುವುದು ಸ್ವಾಗತಾರ್ಹ ಎಂದು ವಿಶೇಷ ತಹಸೀಲ್ದಾರ್ ಭಾಗ್ಯಾ ಹೇಳಿದರು.
ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಆಯೋಜಿಸಿದ್ದ ವಿಜಯವಾಣಿ ‘ನಾರಿ ನಿನಗೊಂದು ಸ್ಯಾರಿ’ ರಸಪ್ರಶ್ನೆ ಸ್ಪರ್ಧೆ ವಿಜೇತರಿಗೆ ಸೀರೆ ವಿತರಿಸಿ ಮಾತನಾಡಿದರು.ಮಹಿಳೆಯರಿಗೆ ಹೆಚ್ಚಿನ ಮಹತ್ವ ನೀಡಿ ಸ್ಪರ್ಧೆ ಆಯೋಜಿಸಿದ್ದು ಸಂತಸದ ಸಂಗತಿ. ಮಹಿಳೆಯರಲ್ಲಿ ಸಂಸ್ಕಾರ, ಸಂಸ್ಕೃತಿಯ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ದಸರಾ ಹಾಗೂ ದೀಪಾವಳಿ ಹಬ್ಬದ ಸಮಯದಲ್ಲಿ ಬಹುಮಾನವಾಗಿ ಸೀರೆ ಕೊಡುವ ಮೂಲಕ ಅದರ ಮಹತ್ವ ಸಾರಿದೆ ಎಂದರು. ಮುಂದಿನ ದಿನಗಳಲ್ಲಿ ಇಂತಹ ಸಾಕಷ್ಟು ಸಮಾಜಮುಖಿ ಕಾರ್ಯಕ್ರಮಗಳು ಆಯೋಜನೆಯಾಗಲಿ ಎಂದು ಆಶಿಸಿದರು.
ಮಹಿಳೆಯರಿಗೆ ಲಲಿತಾ ಪುರವಣಿ ಮೂಲಕ ಸೌಂದರ್ಯ ಸೇರಿ ಬಹಳಷ್ಟು ವಿಷಯಗಳ ಬಗ್ಗೆ ಮಾಹಿತಿ ಕೊಡುವ ವಿಜಯವಾಣಿ, ಮಹಿಳೆಯರಲ್ಲಿ ಸಾಮಾನ್ಯ ಜ್ಞಾನ ಹೆಚ್ಚಿಸುವ ಉದ್ದೇಶದಿಂದ ಸ್ಪರ್ಧೆ ಆಯೋಜಿಸಿದೆ. ಇದರಿಂದ ಮಹಿಳೆಯರು ಪ್ರತಿನಿತ್ಯ ಪ್ರತಿಕೆ ಓದಿ ಜ್ಞಾನ ಹೆಚ್ಚಿಸಿಕೊಳ್ಳಲು ಅನುಕೂಲವಾಗಿದೆ ಎಂದರು.
ಬಹುಮಾನ ಪಡೆದ ನಾರಿಯರು: ಸುಭಾಷ್‌ನಗರದ ರತ್ನಮ್ಮ, ಕೆಂಪಲಿಂಗನಹಳ್ಳಿನ ಟಿ.ಎನ್.ಪವಿತ್ರಾ, ದಾಬಸ್‌ಪೇಟೆಯ ಸುನೀತಾ ಬೈಸೇ, ಬೂದಿಹಾಳ್‌ನ ದೇವಮ್ಮ, ಸೊಂಡೆಕೊಪ್ಪದ ಆರ್.ಅನಸೂಯಾ.