ಜಿಲ್ಲೆ

ದೇಶದ ಅಖಂಡತೆ, ಸಮಗ್ರತೆಗೆ ಶ್ರಮಿಸಿದ ಸರ್ದಾರ

ಶಿರಸಿ: ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಜನ್ಮ ದಿನಾಚರಣೆ ಅಂಗವಾಗಿ ಬಿಜೆಪಿ ಕಚೇರಿಯಿಂದ ಶಿವಾಜಿ ಚೌಕದವರೆಗೆ ಮಂಗಳವಾರ ಆಯೋಜಿಸಿದ್ದ ಸದ್ಭಾವನಾ ಏಕತಾ ಓಟಕ್ಕೆ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಚಾಲನೆ ನೀಡಿದರು.

ಬಳಿಕ ಶಿವಾಜಿ ಮೂರ್ತಿಗೆ ಮಾಲಾರ್ಪಣೆ ನೆರವೇರಿಸಿ ಮಾತನಾಡಿದ ಕಾಗೇರಿ, ಉಕ್ಕಿನ ಮನುಷ್ಯ ಸರ್ದಾರ ವಲ್ಲಭಭಾಯಿ ಪಟೇಲ್ ಅವರು ಅಂದು ದೃಢ ನಿರ್ಧಾರ ತೆಗೆದುಕೊಳ್ಳದಿದ್ದರೆ ದೇಶ ಇಂದು ಅಖಂಡವಾಗಿ ಇರುತ್ತಿರಲಿಲ್ಲ. ದೇಶದ ಅಖಂಡತೆ, ಸಮಗ್ರತೆ ರಕ್ಷಣೆಗಾಗಿ ಸರ್ದಾರ ವಲ್ಲಭಭಾಯಿ ಪಟೇಲ್ ಸದಾ ಶ್ರಮಿಸಿದವರು. ಸ್ವಾತಂತ್ರ್ಯ ಹೋರಾಟ ಹಾಗೂ ಸ್ವಾತಂತ್ರ್ಯಾ ನಂತರ ಅವರ ಕೊಡುಗೆ ಅದಮ್ಯವಾದುದು. ಅವರ ಕೊಡುಗೆಯನ್ನು ಇಂದಿನ ಯುವ ಸಮುದಾಯಕ್ಕೆ ತಿಳಿಸುವ ಕಾರ್ಯ ಆಗಬೇಕು ಎಂಬ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರು ವಲ್ಲಭಭಾಯಿ ಪಟೇಲ್ ಅವರ 150ನೇ ವರ್ಷದ ಜನ್ಮ ದಿನಾಚರಣೆ ವರ್ಷ ಪೂರ್ತಿ ಆಚರಿಸಲು ಸಂಕಲ್ಪಿಸಿದ್ದಾರೆ ಎಂದರು.

ಮೋದಿಯವರು ಪ್ರಧಾನಿಯಾದ ಬಳಿಕ ಪರಕೀಯರ ಆಳ್ವಿಕೆ ಬದಲು ಸ್ವಾತಂತ್ರ್ಯ್ಕಾಗಿ, ಸನಾತನ ಧರ್ಮ ರಕ್ಷಣೆ, ದೇಶ ರಕ್ಷಣೆಗೆ ಶ್ರಮಿಸಿದವರ ಬಗ್ಗೆ ಯುವಜನತೆಗೆ ತಿಳಿಸಲು ಹೆಚ್ಚಿನ ಒತ್ತು ನೀಡಿದ್ದಾರೆ. ಪರಕೀಯರ ದಾಸ್ಯದ ಮನೋಸ್ಥಿತಿಯಿಂದ ನಾವು ಹೊರ ಬರಬೇಕಿದೆ. ದೇಶ ಮೊದಲು ಎಂಬನಂಬಿಕೆ ಮೂಲಕ ಜನತೆಯನ್ನೂ ಜಾಗೃತಗೊಳಿಸಬೇಕಿದೆ. ದೇಶ ವಿರೋಧಿ ಶಕ್ತಿಗಳು ಇಂದು ಅಖಂಡತೆ ಒಡೆಯಲು ಶ್ರಮಿಸುತ್ತಿದೆ. ಅದ್ಯಾವ ಶಕ್ತಿಯ ಆಟವೂ ನಮ್ಮ ರಾಷ್ಟ್ರ ಭಕ್ತಿಯ ಮುಂದೆ ನಡೆಯುವುದಿಲ್ಲ. ಭಾರತ ವಿಶ್ವ ಗುರು ಆಗುವುದನ್ನು ಯಾರಿಂದಲೂ ತಪ್ಪಿಸಲು ಸಾಧ್ಯವಿಲ್ಲ ಎಂದರು.

ಜಿಲ್ಲಾಧ್ಯಕ್ಷ ಎನ್ ಎಸ್. ಹೆಗಡೆ ರ್ಕ, ನಗರಸಭೆ ಅಧ್ಯಕ್ಷೆ ಶರ್ವಿುಳಾ ಮಾದನಗೇರಿ, ಉಪಾಧ್ಯಕ್ಷ ರಮಾಕಾಂತ ಭಟ್, ಪವಿತ್ರಾ ಹೊಸೂರು, ಗಣಪತಿ ನಾಯ್ಕ, ಗುರುಪ್ರಸಾದ ಹೆಗಡೆ ಹರ್ತೆಬೈಲ್, ಆನಂದ ಸಾಲೇರ, ಗಣಪತಿ ನಾಯ್ಕ, ಮಹಾಂತೇಶ ಹಾದಿಮನಿ ಇತರರಿದ್ದರು.