ಜಿಲ್ಲೆ

ಕರಾಟೆ ಸ್ಪರ್ಧೆಯಲ್ಲಿ ಉತ್ತಮ ಸಾಧನೆ

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ: ಪ್ರಿಮೀಯರ್ ಶೋಟೊಕಾನ್ ಸ್ಪೋರ್ಟ್ಸ್ ಕರಾಟೆ ಅಕಾಡೆಮಿ ಹುಬ್ಬಳ್ಳಿಯಲ್ಲಿ ಆಯೋಜಿಸಿದ್ದ ರಾಜ್ಯ ಮಟ್ಟದ ಕರಾಟೆ ಸ್ಪರ್ಧೆಯಲ್ಲಿ ನಗರದ ರೋಟರಿ ಸರಸ್ವತಿ ವಿದ್ಯಾಲಯದ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿದ್ದಾರೆ.

ವರುಣ ಜಾಧವ ಕಾಟಾದಲ್ಲಿ ಪ್ರಥಮ, ಸಮೃದ್ಧ ಚವಟೆ ಕುಮಿಟೆಯಲ್ಲಿ ದ್ವಿತೀಯ, ಕಾಟಾದಲ್ಲಿ ತೃತೀಯ, ಶ್ರದ್ಧಾ ಪವಾರ ಕಾಟಾದಲ್ಲಿ ದ್ವಿತೀಯ, ರೋಶನ್ ಭಾಂಡಗೆ ಕಾಟಾ ಮತ್ತು ಕುಮಿಟೆಯಲ್ಲಿ ತೃತೀಯ, ಶ್ರೀನಿಧಿ ಚವಟೆ ಹಾಗೂ ರೋಹಿತ ಟಿ.ಕೆ. ಕಾಟಾದಲ್ಲಿ ತೃತೀಯ ಸ್ಥಾನ ಪಡೆದಿದ್ದಾರೆ.