ನೆಹರುನಗರ ಕಲ್ಲೇಗದಲ್ಲಿ ಸರಸ್ವತಿ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘದ 21ನೇ ಶಾಖೆಯನ್ನು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ.ಕಲ್ಲಡ್ಕ ಪ್ರಭಾಕರ ಭಟ್ ಉದ್ಘಾಟಿಸಿದರು. ಕಿಶೋರ್ ಕುಮಾರ್ ಬೊಟ್ಯಾಡಿ, ನಳಿನ್ ಕುಮಾರ್ ಕಟೀಲ್, ಎಸ್.ಆರ್.ಸತೀಶ್ಚಂದ್ರ ಇತರರಿದ್ದರು.
- ಡಾ.ಕಲ್ಲಡ್ಕ ಪ್ರಭಾಕರ ಭಟ್ ಸಲಹೆ
- ಸರಸ್ವತಿ ಸೌಹಾರ್ದ ಸಹಕಾರಿ 21ನೇ ಶಾಖೆ ಉದ್ಘಾಟನೆ
ಪುತ್ತೂರು: ಜನಸಾಮಾನ್ಯರ ಕಷ್ಟಗಳಿಗೆ ಸುಲಭದಲ್ಲಿ ಪರಿಹಾರ ನೀಡಲು ಸಹಕಾರಿಗಳು ಸಹಕಾರಿಯಾಗಿವೆ. ಸರ್ವಜನರ ಜತೆಗೆ ಸಂಸ್ಥೆ ನಿಂತಿದ್ದು, ದೊಡ್ಡಪ್ರಮಾಣದಲ್ಲಿ ಅಭಿವೃದ್ಧಿಯತ್ತ ಸಾಗುತ್ತಿದೆ. ಸಂಸ್ಥೆಗೆ ಗ್ರಾಹಕರೇ ದೇವರಾಗಿದ್ದು, ಸಿಬ್ಬಂದಿ ಗ್ರಾಹಕರೊಂದಿಗೆ ಉತ್ತಮ ರೀತಿಯಲ್ಲಿ ವರ್ತಿಸಬೇಕು ಎಂದು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ.ಕಲ್ಲಡ್ಕ ಪ್ರಭಾಕರ ಭಟ್ ಹೇಳಿದರು.
ನೆಹರುನಗರ ಕಲ್ಲೇಗದಲ್ಲಿ ಸೋಮವಾರ ಶ್ರೀ ಸರಸ್ವತಿ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘ ರಜತಮಮೋತ್ಸ ಸಂಭ್ರಮಾಚರಣೆಯೊಂದಿಗೆ 21ನೇ ಶಾಖೆಯನ್ನು ಉದ್ಘಾಟಿಸಿ ಮಾತನಾಡಿದರು.
ಕಚೇರಿ ಸಿವಿಲ್ ವರ್ಕ್ ಮಾಡಿದ ಅಭಿಷೇಕ್, ಒಳಾಂಗಣ ವಿನ್ಯಾಸ ಮಾಡಿದ ಎಂ.ಶಿವಪ್ರಸಾದ್ ರೈ, ಇಲೆಕ್ಟ್ರಿಷಿಯನ್ ಯೋಗೀಶ್ ಅವರನ್ನು ಗೌರವಿಸಲಾಯಿತು.
ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್ ಬೊಟ್ಯಾಡಿ, ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್, ಕಲ್ಕುಡ ದೈವಸ್ಥಾನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಅಜಿತ್ ಕುಮಾರ್ ಜೈನ್, ಕಲ್ಲೇಗ ರೂರಲ್ ಡೆವಲಪ್‌ಮೆಂಟ್ ಟ್ರಸ್ಟ್ ಅಧ್ಯಕ್ಷ ಸಂಜೀವ ನಾಯಕ್ ಕಲ್ಲೇಗ, ನಗರಸಭೆ ಮಾಜಿ ಅಧ್ಯಕ್ಷ ಜೀವಂಧರ್ ಜೈನ್, ಕಟ್ಟಡ ಮಾಲೀಕ ಕೆ.ರಾಜಾರಾಮ್ ಉಪಸ್ಥಿತರಿದ್ದರು.
ಸಿಬ್ಬಂದಿ ವೈಷ್ಣವಿ ಎಸ್.ನಾಯಕ್ ಪ್ರಾರ್ಥಿಸಿದರು. ಸಹಕಾರಿ ಸಂಘದ ಅಧ್ಯಕ್ಷ ಎಸ್.ಆರ್.ಸತೀಶ್ಚಂದ್ರ ಸ್ವಾಗತಿಸಿದರು. ನೆಹರುನಗರ ಶಾಖೆ ವ್ಯವಸ್ಥಾಪಕ ಶಿವಪ್ರಸಾದ್ ಪೆರುವಾಜೆ ವಂದಿಸಿದರು. ದರ್ಬೆಯ ವ್ಯವಸ್ಥಾಪಕ ದೇವಿಪ್ರಸಾದ್ ಎ. ಕಾರ್ಯಕ್ರಮ ನಿರೂಪಿಸಿದರು.