filter: 0; fileterIntensity: 0.000000; filterMask: 0; captureOrientation: 0; hdrForward: 6; shaking: 0.039310; highlight: 1; algolist: 0; multi-frame: 1; brp_mask: 8; brp_del_th: 0.0465,0.0000; brp_del_sen: 0.1500,0.0000; delta:null; module: photo;hw-remosaic: false;touch: (-1.0, -1.0);sceneMode: 7864320;cct_value: 0;AI_Scene: (-1, -1);aec_lux: 0.0;aec_lux_index: 0;HdrStatus: auto;albedo: ;confidence: ;motionLevel: 0;weatherinfo: null;temperature: 40; 
ಜಿಲ್ಲೆ

ಪುತ್ಥಳಿವಿರೂಪಗೊಳಿಸಿದವರಿಗೆ ಶಿಕ್ಷೆಯಾಗಲಿ

ಎ. ಆರ್. ರಘುರಾಮ

ವೀರಶೈವ ಲಿಂಗಾಯತ ಮಹಾಸಭಾ ಆಗ್ರಹ

ಸರಗೂರು : ನಡೆದಾಡುವ ದೇವರು ಎಂದೇ ಖ್ಯಾತರಾಗಿದ್ದ ಸಿದ್ದಗಂಗಾ ಶ್ರೀ ಶಿವಕುಮಾರ ಸ್ವಾಮೀಜಿ ಪುತ್ಥಳಿ ವಿರೂಪಗೊಳಿಸಿದವರಿಗೆ ಶಿಕ್ಷೆಯಾಗಲಿ ಎಂದು ವೀರಶೈವ ಲಿಂಗಾಯತ ಮಹಾಸಭಾ ಮುಖಂಡರು ಆಗ್ರಹಿಸಿದರು.

ಬೆಂಗಳೂರಿನ ಗಿರಿನಗರದ ಬಸ್ ನಿಲ್ದಾಣದ ಬಳಿ ಪುತ್ಥಳಿ ವಿರೂಪಗೊಳಿಸಿದ ಪ್ರಕರಣ ಖಂಡಿಸಿ ಸೋಮವಾರ ಪಟ್ಟಣದಲ್ಲಿ ಮಹಾಸಭಾ ಹಮ್ಮಿಕೊಡಿದ್ದ ಪ್ರತಿಭಟನೆಯಲ್ಲಿ ಭಾಗವಹಿಸಿದ್ದವರು ಕಿಡಿಗೇಡಿಗಳಿಗೆ ಕಠಿಣ ಶಿಕ್ಷೆ ನೀಡಬೇಕು ಎಂದು ಒತ್ತಾಯಿಸಿದರು. ಪಟ್ಟಣದ ಶಿವಾನುಭವ ಮಂಟಪದಿಂದ ಮೆರವಣಿಗೆ ನಡೆಸಿ ತಹಸೀಲ್ದಾರ್ ಕಚೇರಿ ಬಳಿ ಸಮಾವೇಶಗೊಂಡ ಪ್ರತಿಭಟನಾಕಾರರು, ಕಿಡಿಗೇಡಿಗಳ ವಿರುದ್ಧ ಕ್ರಮಕ್ಕೆ ಘೋಷಣೆ ಕೂಗಿದರು. ವೀರಶೈವ ಲಿಂಗಾಯತ ಮಹಾಸಭಾ ತಾಲೂಕು ಅಧ್ಯಕ್ಷ ವೀರಭದ್ರಪ್ಪ ಮಾತನಾಡಿ, ನಾಡಿಗೆ ಮಹತ್ವದ ಕೊಡುಗೆ ನೀಡಿದ ಸ್ವಾಮೀಜಿ ಪುತ್ಥಳಿ ವಿರೂಪಗೊಳಿಸಿರುವವರನ್ನು ಗಡಿಪಾರು ಮಾಡಬೇಕು ಎಂದು ಆಗ್ರಹಿಸಿದರು.

ಪಡುವಲು ವಿರಕ್ತ ಮಠ ಶ್ರೀ ಮಹದೇವ ಸ್ವಾಮೀಜಿ ಮಾತನಾಡಿ, ತ್ರಿವಿಧ ದಾಸೋಹಿಯಾಗಿದ್ದ ಶ್ರೀ ಶಿವಕುಮಾರ ಸ್ವಾಮೀಜಿ ನಮ್ಮೊಡನೆ ಇಲ್ಲ. ಆದರೆ ಅವರ ಜೀವನ, ಸಾಧನೆ, ಮಹಾನ್ ಕಾರ್ಯಗಳು ಅಮರವಾಗಿವೆ. ಅವರ ಪುತ್ಥಳಿ ವಿರೂಪಗೊಳಿಸಿದ್ದು ಖಂಡನೀಯ ಎಂದರು. ದಡದಹಳ್ಳಿ ಮಠದ ಡಾ ಷಡಕ್ಷರಿ ಸ್ವಾಮೀಜಿ, ಆರೋಪಿಗಳಿಗೆ ಯಾವುದೇ ಕಾರಣಕ್ಕೂ ಜಾಮೀನು ನೀಡಬಾರದು ಎಂದರು. ಈಡಿಗ ಸಮಾಜದ ತಾಲೂಕು ಅಧ್ಯಕ್ಷ ಎಸ್ ಎನ್ ನಾಗರಾಜು.ಆದಿ ಕರ್ನಾಟಕ ಮಹಾಸಭಾ ನಿರ್ದೇಶಕ ಗ್ರಾಮೀಣ ಮಹೇಶ್, ಮಹದೇವಸ್ವಾಮಿ, ಸುಧಾ ಮೃತ್ಯುಂಜಯಪ್ಪ, ಮಹಾಸಭಾ ಕೋಶಾಧ್ಯಕ್ಷ ಗಿರೀಶ್ ಮಾತನಾಡಿದರು.

ಮನವಿ ಅರ್ಪಣೆ: ಆರೋಪಿಗಳ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಗ್ರೇಡ್ 2 ತಹಸೀಲ್ದಾರ್ ಪರಶಿವಮೂರ್ತಿ ಅವರಿಗೆ ಸಭಾ ವತಿಯಿಂದ ಮನವಿ ಸಲ್ಲಿಸಲಾಯಿತು. ಹಂಚೀಪುರ ಸಿದ್ದಮಲ್ಲೇಶ್ವರ ಪಟ್ಟದಮಠದ ಶ್ರೀ ತೊಂಟದಾರ್ಯ ಸ್ವಾಮೀಜಿ, ಮುಖಂಡರಾದ ಡಿ.ಜಿ. ಶಿವರಾಜು, ಅಣ್ಣಯ್ಯಸ್ವಾಮಿ, ಗುರುಸ್ವಾಮಿ, ಗಣಪತಿ, ನಂದೀಶ, ಮಹದೇವಸ್ವಾಮಿ, ರಾಜಣ್ಣ, ಪರಶಿವ, ಸಕಲೇಶ, ಬಸವಣ್ಣ, ಶಿವರಾಜಪ್ಪ, ನಂಜಪ್ಪ, ಸಿದ್ದಪ್ಪ ಇತರರು ಇದ್ದರು.