ಜಿಲ್ಲೆ

ಆರೋಗ್ಯ ಮಂದಿರ ನಿರ್ಮಾಣಕ್ಕೆ ಸ್ಥಳ ಪರಿಶೀಲನೆ

ಮೊಳೆಯೂರು ಗ್ರಾಮಕ್ಕೆ ಅಧಿಕಾರಿಗಳ ತಂಡ ಭೇಟಿ
ಸರಗೂರು: ಬಿ.ಮಟಕೆರೆ ಗ್ರಾಪಂ ವ್ಯಾಪ್ತಿಯ ಮೊಳೆಯೂರು ಗ್ರಾಮದಲ್ಲಿ ಆಯುಷ್ಮಾನ್ ಆರೋಗ್ಯ ಮಂದಿರ ನಿರ್ಮಾಣ ಮಾಡಲು ಬುಧವಾರ ಸರಗೂರು ತಾಲೂಕು ಆರೋಗ್ಯಾಧಿಕಾರಿ ನೇತೃತ್ವದ ಅಧಿಕಾರಿಗಳ ತಂಡ ಸ್ಥಳ ಪರಿಶೀಲನೆ ನಡೆಸಿತು.
ನಂತರ ಮಾತನಾಡಿದ ಟಿಎಚ್‌ಒ ಡಾ. ರವಿಕುಮಾರ್, ತಾಲೂಕಿನಲ್ಲಿ ಒಟ್ಟು 32 ಆರೋಗ್ಯ ಉಪ ಕೇಂದ್ರ ಗಳಿವೆ.
ಇದ್ದರಲ್ಲಿ 14 ಉಪ ಕೇಂದ್ರಗಳಿಗೆ ಸ್ವಂತ ಕಟ್ಟಡ ಇದೆ. ಉಳಿದ 18 ಆರೋಗ್ಯ ಮತ್ತು ಕ್ಷೇಮ ಕೇಂದ್ರಗಳ
ನಿರ್ಮಾಣಕ್ಕೆ ನಿವೇಶನಗಳ ಅವಶ್ಯಕತೆ ಇದೆ ಎಂದರು. ಇದ್ದರ ಬಗ್ಗೆ ನಾವು ತಹಸೀಲ್ದಾರ್ ಹಾಗೂ ತಾಪಂ ಇಒಗೆ ಬೇಡಿಕೆ ಪತ್ರ ವನ್ನು ಈಗಾಗಲೇ ನೀಡಿದ್ದೇವೆ. ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳೂ ನಿವೇಶನ ಮಂಜೂರು ಮಾಡಿ ಕೊಡಲು ಸಹಕರಿಸಬೇಕು ಎಂದು ಸೂಚಿಸಲಾಗಿದೆ ಎಂದರು.
ಸರಗೂರು ತಾಲೂಕಿನಲ್ಲಿ 18 ಸ್ಥಳದಲ್ಲಿ ಆರೋಗ್ಯ ಮತ್ತು ಕ್ಷೇಮ ಕೇಂದ್ರ ವನ್ನು ನಿರ್ಮಾಣ ಮಾಡಲು ನಿವೇಶನ ದೊರಕಿಸಿಕೊಟ್ಟರೆ ಆಯುಷ್ಮಾನ್ ಆರೋಗ್ಯ ಮಂದಿರ ನಿರ್ಮಾಣ ಮಾಡಿ ಜನರಿಗೆ ಸೂಕ್ತ ಆರೋಗ್ಯಸೇವೆ ಒದಗಿಸುತ್ತೇವೆ ಎಂದು ಡಾ. ರವಿಕುಮಾರ್ ತಿಳಿಸಿದರು. ಬಿ.ಮಟಕೆರೆ ಪ್ರಾಥಮಿಕ ಆರೋಗ್ಯದ ಆಡಳಿತ ವೈದ್ಯಾಧಿಕಾರಿ ಡಾ. ಚಂದ್ರ ಶೇಖರ್, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಭಾಗ್ಯಾ, ಗ್ರಾಮದ ಮುಖಂಡರಾದ ಹರಿದಾಸ್, ಇಲಾಖೆ ಸಿಬ್ಬಂದಿ ಹಾಜರಿದ್ದರು.