ಜಿಲ್ಲೆ

ಮಾನಸಿಕ ಸುಸ್ಥಿತಿ ಕಳೆದುಕೊಂಡವರಿಂದಲೇ ಗಲಾಟೆ

reportermys

ಮಂಡ್ಯ: ಮಾನಸಿಕ ಸುಸ್ಥಿತಿ ಕಳಕೊಂಡವರಿಂದಲೇ ಮಾತ್ರ ಕೋಮು ಗಲಭೆ, ಜಾತಿಯತೆ ಗಲಾಟೆಗಳು ಸೃಷ್ಟಿಯಾಗುವುದು ಎಂದು ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮಾಧಿಕಾರಿ ಡಾ.ಅಶ್ವಥ್ ಹೇಳಿದರು.
ನಗರದ ರೋಟರಿ ಸಭಾಂಗಣದಲ್ಲಿ ಕೇಂದ್ರ ಸರ್ಕಾರ ಯುವ ಕಾರ್ಯ ಹಾಗೂ ಕ್ರೀಡಾ ಸಚಿವಾಲಯ, ನೆಹರು ಯುವ ಕೇಂದ್ರ, ಜಿಲ್ಲಾಡಳಿತ, ಜಿಪಂ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಮಾನಸಿಕ ಆರೋಗ್ಯ ವಿಭಾಗ, ವಿಕಸನ ಸಂಸ್ಥೆ, ಅನನ್ಯ (ಹಾರ್ಟ್) ಸಂಸ್ಥೆ ಸಹಯೋಗದಲ್ಲಿ ಶುಕ್ರವಾರ ಆಯೋಜಿಸಿದ್ದ ರಾಷ್ಟ್ರೀಯ ಕೋಮು ಐಕ್ಯತಾ ದಿನ ಹಾಗೂ ಸಪ್ತಾಹ ಉದ್ಘಾಟಿಸಿ ಮಾತನಾಡಿದರು.
ಮನುಷ್ಯರನ್ನು ಮಾನಸಿಕವಾಗಿ ದೌರ್ಬಲ್ಯರನ್ನಾಗಿಸಿ ಅಥವಾ ಆಮಿಷಕ್ಕೆ ಒಳಪಡಿಸಿ ಕೋಮು ಗಲಭೆಗಳಿಗೆ ಪ್ರಚೋಧನೆ ನೀಡುತ್ತಾರೆ. ಅಂತಹವರು ಸರಿ ತಪ್ಪುಗಳನ್ನು ಮನನ ಮಾಡದೆ, ವಿಕೃತ, ವಿಧ್ವಂಸ ಕೃತ್ಯಗಳನ್ನು ಎಸಗುತ್ತಾರೆ. ಪ್ರಬುದ್ಧ ಭಾರತ ನಿರ್ಮಾಣಕ್ಕೆ ಸದೃಡ ಮನಸ್ಸಿಗರು, ಸಹೃದಯಿಗರು, ಕೌಶಲತೆಯುಳ್ಳವರು ಅತ್ಯವಶ್ಯಕವಾಗಿ ಬೇಕಾಗಿರುತ್ತಾರೆ. ಎಲ್ಲರೂ ಐಕ್ಯತೆಯಿಂದರಲು ಮಾನಸಿಕ ಸುಸ್ಥಿತಿ ಅತ್ಯಾವಶ್ಯಕ ಎಂದರು.
ಜಿಲ್ಲಾ ಕ್ಷಯರೋಗ ನಿಯಂತ್ರಾಧಿಕಾರಿ ಡಾ.ಅನಿಲ್‌ಕುಮಾರ್, ವಿಜಯ್, ಮಹಮದ್ ಕೊಯಲ್, ಬಸವರಾಜು, ಅನುಪಮಾ, ದೇವರಾಜು ಕೊಪ್ಪ ಇತರರಿದ್ದರು.