ವಿಟ್ಲ: ಸ್ಮಾರ್ಟ್‌ಸಿಟಿ ಕಾಂಪ್ಲೆಕ್ಸ್‌ನಲ್ಲಿರುವ ಸಪ್ತ ಜುವೆಲ್ಸ್‌ನ ಸಪ್ತದೊಂದಿಗೆ ಅಕ್ಷಯ ತೃತೀಯಾ ಕಾರ್ಯಕ್ರಮದ ಅಂಗವಾಗಿ ಇಷ್ಟವಾದ ಆಭರಣಗಳನ್ನು ಕಾಯ್ದಿರಿಸಿದ ಗ್ರಾಹಕರಿಗೆ ಚಿನ್ನದ ನಾಣ್ಯ ಬಹುಮಾನದ ಆಯ್ಕೆ ಪ್ರಕ್ರಿಯೆ ನಡೆಯಿತು.
ಗ್ರಾಹಕರಾದ ಧನ್ಯಶ್ರೀ ಪಡಾರು ಅದೃಷ್ಟ ಚೀಟಿ ಎತ್ತುವ ಮೂಲಕ ವಿಜೇತರ ಆಯ್ಕೆ ನಡೆಸಿದರು. ರೇವತಿ ಅಣ್ಣಿಮೂಲೆ ಚಿನ್ನದ ನಾಣ್ಯದ ಅದೃಷ್ಟವಂತರಾಗಿ ಆಯ್ಕೆಯಾಗಿದ್ದಾರೆ.
ನಂದನ್ ಪಡಾರು, ಸಪ್ತ ಜುವೆಲ್ಸ್ ಪಾಲುದಾರರಾದ ಅಜಕ್ಕಳ ಶ್ಯಾಮ ಭಟ್, ಸುದರ್ಶನ್ ಕುಮಾರ್ ಇರ್ಕಾಜೆ, ಶಿವಪ್ರಕಾಶ್ ಪಂಜಿಬಲ್ಲೆ, ದೇವಿಪ್ರಸಾದ್ ಚಂಗಲ್ಪಾಡಿ, ನಿಶಾ ಪ್ರಶಾಂತ ಸರಳಾಯ, ಕೃಷ್ಣಪ್ರಸಾದ್ ಕಡವ, ಗೋವಿಂದರಾಜ ಕಲ್ಲಮಜಲು, ಸುಕುಮಾರ ಕಲ್ಲಮಜಲು ಉಪಸ್ಥಿತರಿದ್ದರು.