ಜಿಲ್ಲೆ

ಸಪ್ಪಲಾಂಭ ದೇವಾಲಯ ಹುಂಡಿಯಲ್ಲಿ 6.67 ಲಕ್ಷ ರೂ. ಸಂಗ್ರಹ

ಕೋಲಾರ ಡೆಸ್ಕ್

ಮಡಿವಾಳ: ತಾಲೂಕಿನ ಕಸಬಾ ಹೋಬಳಿಯ ತೊರ‌್ನಹಳ್ಳಿಯ ಸಪ್ಪಲಾಂಭ ದೇವಾಲಯದಲ್ಲಿ ಮಂಗಳವಾರ ಹುಂಡಿ ಎಣಿಕೆ ಮಾಡಿದ್ದು, 6,67,710 ರೂ. ಸಂಗ್ರಹವಾಗಿದೆ ಎಂದು ಮುಜರಾಯಿ ಇಲಾಖೆಯ ದೇವಾಲಯದ ಕಾರ್ಯನಿರ್ವಹಣಾಧಿಕಾರಿ ಸೆಲ್ವಮಣಿ ತಿಳಿಸಿದರು.

ಮಾಲೂರು ತಾಲೂಕು ತೊರ‌್ನಹಳ್ಳಿ ಗ್ರಾಪಂ ವ್ಯಾಪ್ತಿಯಲ್ಲಿ ಸಪ್ಪಲಾಂಭ ಭೀಮೇಶ್ವರ ಸ್ವಾಮಿಯ ಜಾತ್ರಾ ಮಹೋತ್ಸವ ಜನವರಿಯಲ್ಲಿ ನಡೆದಿದ್ದು, ಜಾತ್ರಾ ಮಹೋತ್ಸವಕ್ಕೆ ಆಗಮಿಸಿದ ಭಕ್ತಾದಿಗಳು ಹುಂಡಿಗೆ ಹಾಗೂ ಕಾಣಿಕೆ ರೂಪದಲ್ಲಿ ಅರ್ಪಿಸಿದ್ದ ಹಣವನ್ನು ತಹಸೀಲ್ದಾರ್ ಅನುಮತಿಯ ಮೇರೆಗೆ ಎಣಿಕೆ ಮಾಡಲಾಗಿದೆ.

ಸಂಗ್ರಹ ಹಣವನ್ನು ಕರ್ನಾಟಕ ಗ್ರಾಮೀಣ ಬ್ಯಾಂಕ್‌ನಲ್ಲಿರುವ ದೇವಾಲಯದ ಉಳಿತಾಯ ಖಾತೆಗೆ ಜಮೆ ವಾಡಿರುವುದಾಗಿ ಮುಜರಾಯಿ ಇಲಾಖೆಯ ದೇವಾಲಯದ ಕಾರ್ಯನಿರ್ವಹಣಾಧಿಕಾರಿ ಸೆಲ್ವಮಣಿ ತಿಳಿಸಿದ್ದಾರೆ.

ಹುಂಡಿ ಎಣಿಕೆ ಕಾರ್ಯದಲ್ಲಿ ಕಂದಾಯ ಇಲಾಖೆಯ ರಾಜಸ್ವ ನಿರೀಕ್ಷಕ ಗ್ರಾಮ ಆಡಳಿತ ಅಧಿಕಾರಿಗಳಾದ ಶಿವಕುವಾರ್, ವೆಂಕಟೇಶ್, ದರ್ಶಿನಿ, ವಿಣಾ, ಮೀನಾ, ದೇವಾಲಯದ ಅರ್ಚಕ ಮುನಿಯಪ್ಪ ಇದ್ದರು.