ನರಗುಂದ: ತಾಲೂಕಿನ ಹುಣಸೀಕಟ್ಟಿ ಗ್ರಾಪಂ ವ್ಯಾಪ್ತಿಯ ಅಮೃತ ಸರೋವರ ಕೆರೆ ದಂಡೆಯ ಮೇಲೆ ಸಸಿ ನೆಡುವ ಕಾರ್ಯಕ್ಕೆ ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಮಂಜುಳಾ ಹಕಾರಿ ಶುಕ್ರವಾರ ಚಾಲನೆ ನೀಡಿದರು.
ನರೇಗಾದಡಿ ನಿರ್ಮಾಣ ಆಗುತ್ತಿರುವ ಹುಣಸೀಕಟ್ಟಿಯ ಅಮೃತ ಸರೋವರದ ಕೆರೆಯ ಸುತ್ತ ಸಸಿಗಳನ್ನು ನೆಡಲಾಯಿತು. ತಾಪಂ ಇಒ ಮಂಜುಳಾ ಹಕಾರಿ ಮಾತನಾಡಿ, ಸ್ವಾತಂತ್ರೊೃೀತ್ಸವ ದಿನಾಚರಣೆ ಅಂಗವಾಗಿ ‘ವಸುಧಾ ವಂದನ್’ ಕಾರ್ಯಕ್ರಮದಡಿ ತಾಲೂಕಿನ ಪ್ರತಿಯೊಂದು ಗ್ರಾಪಂ ವ್ಯಾಪ್ತಿಯಲ್ಲಿ 75 ಸಸಿಗಳನ್ನು ನೆಡಲಾಗುತ್ತಿದೆ. ನೆಟ್ಟ ಸಸಿಗಳನ್ನು ಗ್ರಾಪಂ ಅಧಿಕಾರಿ, ಸಿಬ್ಬಂದಿ ಪಾಲನೆ, ಪೋಷಣೆ ಮಾಡುವುದರ ಮೂಲಕ ಪರಿಸರ ಸಂರಕ್ಷಣೆಗೆ ಶ್ರಮಿಸಬೇಕು ಎಂದು ತಿಳಿಸಿದರು.
ಜಿಪಂ ಎಡಿಪಿಸಿ ಕಿರಣಕುಮಾರ್, ಹುಣಸೀಕಟ್ಟಿ ಪಿಡಿಒ ವಿ.ಆರ್. ರಾಯನಗೌಡ್ರ, ಭರಮಪ್ಪ, ಬಿ.ಎಲ್. ಹುಡೇದಮನಿ, ಬಸನಗೌಡ ಬನಪ್ಪಗೌಡ್ರ, ಚನ್ನಬಸನಗೌಡ ದ್ಯಾವನಗೌಡ್ರ, ಬಸನಗೌಡ ಜಾಮದಾರ, ಹನುಮಂತಗೌಡ ದ್ಯಾವನಗೌಡ್ರ, ಗ್ರಾಮ ಪಂಚಾಯಿತಿ ಹಾಗೂ ನರೇಗಾ ಸಿಬ್ಬಂದಿ ಇದ್ದರು.