ಸಿರವಾರದಲ್ಲಿ ಶಾಂತಿನಿಕೇತನ ಶಾಲೆಯ ವಿದ್ಯಾರ್ಥಿಗಳು ಅಂತರರಾಷ್ಟ್ರೀಯ ವಿಶ್ವ ಶಾಂತಿ ದಿನಾಚರಣೆ ಅಂಗವಾಗಿ ಜಾಗೃತಿ ಜಾಥಾ ನಡೆಸಿದರು. ಮುಖ್ಯ ಶಿಕ್ಷಕಿ ಯು.ಅನುರಾಧ, ಕಬ್ ಮಾಸ್ಟರ್ ಕುಸುಮಾ ಪವಾರ್ ಇದ್ದರು. 
ಜಿಲ್ಲೆ

ಪ್ರಪಂಚದಲ್ಲಿ ಶಾಂತಿ ನೆಲಸಲಿ

ಸಿರವಾರ: ಪ್ರತಿಯೊಬ್ಬರು ಜೀವನದಲ್ಲಿ ಶಾಂತಿಯ ತತ್ವವನ್ನು ಅಳವಡಿಸಿಕೊಳ್ಳಲಿ ಎಂದು ಮುಖ್ಯ ಶಿಕ್ಷಕಿ ಯು.ಅನುರಾಧ ಹೇಳಿದರು.

ಶಾಂತಿಯ ತತ್ವವನ್ನು ಅಳವಡಿಸಿಕೊಳ್ಳಲಿ

ಪಟ್ಟಣದ ಶಾಂತಿನಿಕೇತನ ಶಾಲೆಯಲ್ಲಿ ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ , ಅಬ್ದುಲ್ ಕಲಾಂ ಸ್ಕೌಟ್ಸ್ ಟ್ರೂಪ್, ಡಾ.ಶಕುಂತಲಾ ದೇವಿ ಗೈಡ್ಸ್ ಘಟಕ, ಮಾಸ್ಟರ್ ಮೈಂಡ್ಸ್ ಕಬ್ ಪ್ಯಾಕ್, ಆಕ್ಟಿವ್ ಏಂಜೆಲ್ಸ್ ಬುಲ್ಬುಲ್ ಜಂಟಿಯಾಗಿ ಹಮ್ಮಿಕೊಂಡಿದ್ದ ಅಂತರರಾಷ್ಟ್ರೀಯ ವಿಶ್ವ ಶಾಂತಿ ದಿನಾಚರಣೆಯಲ್ಲಿ ಮಾತನಾಡಿದರು. ಪ್ರಪಂಚದಲ್ಲಿ ನಡೆಯುತ್ತಿರುವ ಹಿಂಸಾಚಾರಗಳು, ಸಂಘರ್ಷ, ಯುದ್ಧ ನಿಲ್ಲಿಸಲು ಶಾಂತಿ ಕಾಪಾಡುವ ಸಂದೇಶ ಸಾರಲು ವಿಶ್ವ ಶಾಂತಿದಿನವನ್ನು ಆಚರಿಸಲಾಗುತ್ತದೆ ಎಂದರು.

ಇದಕ್ಕೂ ಮುನ್ನ ಪಟ್ಟಣದಲ್ಲಿ ವಿದ್ಯಾರ್ಥಿಗಳು ಬಿತ್ತಿ ಪತ್ರ ತೋರಿಸುವ ಮೂಲಕ ಜಾಗೃತಿ ಜಾಥಾದಲ್ಲಿ ಜನರಿಗೆ ಅರಿವು ಮೂಡಿಸಿದರು. ಕಬ್ ಮಾಸ್ಟರ್ ಕುಸುಮಾ ಪವಾರ್, ದೈಹಿಕ ಶಿಕ್ಷಣ ಶಿಕ್ಷಕ ಅಂಬು, ಮುಖ್ಯ ಶಿಕ್ಷಕ ಸಿ.ಬಾಬು ಸ್ಕೌಟ್, ಗೈಡ್ ವಿದ್ಯಾರ್ಥಿಗಳು ಇದ್ದರು.