ಜಿಲ್ಲೆ

ಸಾಮಾಜಿಕ ಪಿಡುಗುಗಳ ವಿರುದ್ಧ ಸಂತ ಶ್ರೀಸೇವಾಲಾಲ್ ಹೋರಾಟ

ಕೊಳ್ಳೇಗಾಲ: ಸಂತ ಶ್ರೀಸೇವಾಲಾಲ್ ಅವರು ಗುರಿರಹಿತ ಜೀವನ ಮನೆ ಅಂಗಳದ ಕಸ, ಕಡ್ಡಿಯಂತೆ ಎಂದಿದ್ದರು ಎಂದು ಶಾಸಕ ಎ.ಆರ್.ಕೃಷ್ಣಮೂರ್ತಿ ಸ್ಮರಿಸಿದರು.


ಪಟ್ಟಣದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಶನಿವಾರ ತಾಲೂಕು ಆಡಳಿತ ಹಾಗೂ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಆಯೋಜಿಸಿದ್ದ ಸಂತ ಶ್ರೀಸೇವಾಲಾಲ್ ಜಯಂತಿ ಸಮಾರಂಭದಲ್ಲಿ ಮಾತನಾಡಿದರು.


ಮಹಾ ತಪಸ್ವಿ, ಸಮಾಜ ಸುಧಾರಕ ಶ್ರೀಸಂತ ಸೇವಾಲಾಲ್ ಅವರು ತತ್ವ ಹಾಗೂ ಆದರ್ಶಗಳು ಮಹತ್ವವಾಗಿವೆ. ಮೂಢನಂಬಿಕೆ, ಇನ್ನಿತರ ಸಾಮಾಜಿಕ ಪಿಡುಗುಗಳ ವಿರುದ್ಧ ಜೀವನವಿಡೀ ಹೋರಾಟ ನಡೆಸಿದ್ದಾರೆ ಎಂದರು.


2013-18ನೇ ಸಾಲಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಾಂಡಗಳನ್ನು ಕಂದಾಯ ಭೂಮಿಯಾಗಿ ಪರಿವರ್ತಿಸಲು ದಿಟ್ಟ ತೀರ್ಮಾನ ಕೈಗೊಂಡರು. ಆನಂತರ ಸರ್ಕಾರ ಬದಲಾವಣೆ ಆಯಿತು. ತಾಂಡಗಳು ಕಂದಾಯ ಭೂಮಿಯಾಗಿ ಪರಿವರ್ತನೆಗೊಂಡ ಬಳಿಕ ಫಲಾನುಭವಿಗಳಿಗೆ ಪ್ರಧಾನಿ ನರೇಂದ್ರ ಮೋದಿ ಗುಲ್ಬರ್ಗಾದಲ್ಲಿ ವಿತರಣೆ ಮಾಡಿದರು. ಆಗ, ಜನರು ಇದು ಪ್ರಧಾನಿ ಅವರ ಕೊಡುಗೆ ಎಂದು ನಂಬಿದ್ದಾರೆ. ನಿಜವಾಗಿಯೂ ಇದು ಸಿದ್ದರಾಮಯ್ಯ ಅವರ ಕೆಲಸವಾಗಿದೆ ಎಂದು ಹೇಳಿದರು.


ಇದಕ್ಕೂ ಮೊದಲು ಗಣ್ಯರು ಬಸವಣ್ಣ ಅವರ ಭಾವಚಿತ್ರವನ್ನು ಅನಾವರಣ ಮಾಡಿದರು.
ಮೈಸೂರು ಗೋರ್ ಸೀಕ್ವಾಡಿ ಸಂಚಾಲಕ ಚಂದ್ರ ಪ್ರಕಾಶ್ ಮಾತನಾಡಿದರು.


ಡಿವೈಎಸ್ಪಿ ಎಂ.ಧರ್ಮೇಂದ್ರ, ತಹಸೀಲ್ದಾರ್ ಎಂ. ಮಂಜುಳಾ, ಬಿಇಒ ಎಂ.ಮಂಜುಳಾ, ಸಿಪಿಐ ಶಿವಮಾದಯ್ಯ, ಲಾಂಬಾಣಿ ನೌಕರ ಸಂಘದ ಅಧ್ಯಕ್ಷ ಪಳನಿಸ್ವಾಮಿ, ಗೌರವಾಧ್ಯಕ್ಷ ಶಾಂತರಾಜು ಮತ್ತಿತರಿದ್ದರು.