ಜಿಲ್ಲೆ

ಸಂಸ್ಕೃತ ವಿವಿಗಿಲ್ಲ ಉದ್ಘಾಟನಾ ಭಾಗ್ಯ

ಗಂಗಾಧರ ಬಿ ವಿ

* ನೂತನ ಕಟ್ಟಡ ನಿರ್ಮಾಣಗೊಂಡು ಹಲವು ತಿಂಗಳೇ ಕಳೆದರೂ ನಿಗದಿಯಾಗಿಲ್ಲ ದಿನಾಂಕ

ಎಂ.ಎಸ್​.ಸಿದ್ದಲಿಂಗೇಶ್ವರ ಮಾಗಡಿ

ರಾಜ್ಯ ಸಂಸ್ಕೃತ ವಿಶ್ವ ವಿದ್ಯಾಲಯ ಹೊಸ ಕಟ್ಟಡ ನಿರ್ಮಾಣಗೊಂಡು ತಿಂಗಳೇ ಕಳೆದರೂ ಲೋಕಾರ್ಪಣೆ ಭಾಗ್ಯ ಲಭಿಸಿಲ್ಲ.

ಹೌದು. ತಾಲೂಕಿನ ತಿಪ್ಪಸಂದ್ರ ಹೋಬಳಿ ಕೆಂಪಯ್ಯನ ಪಾಳ್ಯದ ಮರಡಿ ಗುಡ್ಡೆಯ 100 ಎಕರೆ ಪ್ರದೇಶದಲ್ಲಿ 2022ರ ಜ.3 ರಂದು ಅಂದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ರಾಮನಗರದಲ್ಲಿ ಸಂಸ್ಕೃತ ವಿವಿಗೆ ಭೂಮಿ ಪೂಜೆ ನೆರವೇರಿಸಿದ್ದರು. 25 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗಿರುವ ಕಟ್ಟಡದಲ್ಲಿ ಬಾಲಕ, ಬಾಲಕಿಯರ ವಸತಿ ನಿಲಯ, ಆಡಳಿತ ಕಚೇರಿ, ತರಗತಿ ಕೊಠಡಿಗಳಿವೆ, ಪದವಿ, ಸ್ನಾತಕೋತ್ತರ ಪದವಿ, ಪಿಎಚ್​.ಡಿ, ಎಂಫಿಲ್​, ಸಂಸ್ಕೃತ ಪ್ರಥಮ, ಕಾವ್ಯಾ, ಯೋಗ, ಆಯುರ್ವೇದ, ಸಾಹಿತ್ಯಗಳಿಂದ ಒಳಗೊಂಡಿರುವ ವಿಶ್ವವಿದ್ಯಾಲ ಇದಾಗಿದೆ.

ಸುಸಜ್ಜಿತ ಕಟ್ಟಡ:

ವಿವಿಯ ಕಟ್ಟಡದ ಕೆಲಸ ಪೂರ್ಣಗೊಂಡು ಎರಡು ತಿಂಗಳು ಕಳೆದಿದ್ದು, ಸುಮಾರು 100 ಮಂದಿ ವಿದ್ಯಾರ್ಥಿಗಳು ತಂಗಲು ಹಾಸಿಗೆ, ಸುಸರ್ಜಿತ ಅಡುಗೆ ಮನೆ, ಬಿಸಿನೀರಿನ ವ್ಯವಸ್ಥೆ ಸೇರಿ ಮೂಲ ವ್ಯವಸ್ಥೆ ಈಗಾಗಲೇ ಕಲ್ಪಿಸಲಾಗಿದೆ. ಆದರೆ, ಅಧಿಕಾರಿಗಳ ಇಚ್ಛಾಸಕ್ತಿ ಕೊರತೆಯಿಂದ ಉದ್ಘಾಟನಾ ಭಾಗ್ಯ ಇಲ್ಲವಾಗಿದೆ.

ಚಾಮರಾಜಪೇಟೆಯಲ್ಲಿ ತರಗತಿ: 2010ರಲ್ಲಿ ಸಂಸ್ಕೃತ ವಿಶ್ವವಿದ್ಯಾಲಯ ಆರಂಭವಾಗಿದ್ದು, ಸದ್ಯ, ಬೆಂಗಳೂರಿನ ಚಾಮರಾಜಪೇಟೆಯ ಜಯಚಾಮರಾಜೇಂದ್ರ ಕಾಲೇಜಿನಲ್ಲಿ ತರಗತಿಗಳು ನಡೆಯುತ್ತಿದ್ದು, ರಾಜ್ಯದ ವಿವಿಧೆಡೆಗಳಲ್ಲಿ 80 ಸಾವಿರ ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ. 300 ಮಂದಿ ಸಂಸ್ಕೃತ ಪಿಎಚ್​.ಡಿ ಮುಗಿಸಿದ್ದಾರೆ, 1 ಸಾವಿರ ಮಂದಿ ಎಂಪಿಎಲ್​ ಮಾಡುತ್ತಿದ್ದು, ಪ್ರತಿ ವರ್ಷ 80 ಸಾವಿರ ವಿದ್ಯಾರ್ಥಿಗಳು ಸಂಸ್ಕೃತ ಕಲಿತು ಹೊರಬರುತ್ತಿದ್ದಾರೆ.

ರಾಜ್ಯದಲ್ಲಿ 800 ಅನುದಾನಿತ, ಅನುದಾನಿತ ರಹಿತ ಸಂಸತ ಪಾಠಶಾಲೆ, 30 ಸಂಸತ ಕಾಲೇಜುಗಳಿವೆ. ಇಲ್ಲಿ ಸಂಸತ ಕಲಿತವರಿಗೆ ಅಧ್ಯಾಪಕರಾಗಲು ಅವಕಾಶವಿದೆ ಹಾಗೂ ಹಲವರು ದೇಶ, ವಿದೇಶಗಳಲ್ಲಿ ಪೌರೋಹಿತ್ಯ ಮಾಡುತ್ತಿದ್ದಾರೆ. ಪರೀಕ್ಷಾ ಶುಲ್ಕ ಹೊರತು ಪಡಿಸಿ ಬೇರೆ ಯಾವ ಶುಲ್ಕ ಇಲ್ಲದಂತೆ 12 ವರ್ಷದಿಂದ 60 ವರ್ಷದವರೆಗಿನವರಿಗೆ ಲಿಂಗ ತಾರತಮ್ಯ ಇಲ್ಲದೆ, ಉಚಿತವಾಗಿ ಸಂಸ್ಖೃತ ಕಲಿಸಲಾಗುತ್ತಿದೆ ಎಂದು ತಿಪ್ಪಸಂದ್ರ ವಿವಿ ಕ್ಯಾಂಪಸ್​ ಅಭಿವೃದ್ಧಿ ಮೇಲ್ವಿಚಾರಕರಾಗಿರುವ ಡಾ.ಆರ್​. ತಿಮ್ಮಣ್ಣ ಕರ್ತವ್ಯ ಮಾಹಿತಿ ನೀಡಿದ್ದಾರೆ.

ಗುರುಕುಲ ಪದ್ಧತಿ: ಗುರುಕುಲ ಪದ್ಧತಿ, ಏಕಕಾಲದಲ್ಲಿ ಒಂದು ಸಾವಿರ ಮಂದಿ ಯೋಗ ತರಬೇತಿ ಪಡೆಯಲು, ಆಯುರ್ವೇದದ ಬಗ್ಗೆ ತರಬೇತಿ ನೀಡಲು ಈಗ ಸಂಸತ ವಿವಿಗೆ ನೀಡಿರುವ 100 ಎಕರೆ ಜಮೀನು ಸಾಲದು, ಇನ್ನೂ ಹೆಚ್ಚಿನ ಜಾಗದ ಅಗತ್ಯತೆ ಇದೆ.

ಬಿದಿರಿನ ಗಿಡ ನಾಟಿ:

ಪರಿಸರ ಉಳಿವಿಗೆ ಎಸ್​ಬಿಐ ಫೌಂಡೇಷನ್ ನಿಂದ 35 ಬಗೆಯ ಸಸಿ ನೆಟ್ಟು ಪೋಷಿಸಲಾಗುತ್ತಿದೆ. ಪ್ರಕೃತಿಗೆ ಹೊಂದಾಣಿಕೆಯಾಗುವ ರೀತಿಯಲ್ಲಿ ಬಿದಿರಿನ ಗಿಡ ನೆಡುವ ಮೂಲಕ ತಡೆಗೋಡೆ ಮಾದರಿ ಬೆಳೆಸಲಾಗುತ್ತಿದೆ. ಬೆಂಗಳೂರು& ಮಂಗಳೂರು ರಾಷ್ಟ್ರೀಯ ಹೆದ್ದಾರಿಯಿಂದ ಸಂಸ್ಕೃತ ವಿವಿಯವರೆಗೆ ಮಣ್ಣಿನ ರಸ್ತೆ ಇದ್ದು, ಸುಸಜ್ಜಿತ ರಸ್ತೆ ಅಭಿವೃದ್ಧಿಗೆ ಶಾಸಕರು ಮುಂದಾಗಿದ್ದಾರೆ.

ಸಂಸ್ಕೃತ ವಿವಿ ಕಟ್ಟಡವನ್ನು ಸರ್ಕಾರ ಉತ್ತಮವಾಗಿ ಕಟ್ಟಿಕೊಟ್ಟು ಪ್ರೋತ್ಸಾಹ ನೀಡುತ್ತಿದೆ. ಕಟ್ಟಡ ನಮ್ಮ ಸುಪರ್ದಿಗೆ ನೀಡಿದ ನಂತರ ಸರ್ಕಾರದ ಆದೇಶದಂತೆ ಕಾರ್ಯನಿರ್ವಹಿಸಲಾಗುವುದು. ಇಂದು ನೈತಿಕ ಶಿಕ್ಷಣ ಅಗತ್ಯತೆ ಇದೆ, ಪ್ರಪಂಚದ ದೃಷ್ಟಿಕೋನ ವಿಸ್ತಾರವಾಗಿದೆ. ಮೆಡಿಕಲ್​, ಇಂಜಿನಿಯರಿಂಗ್​, ಕಾನೂನು ಪದವಿ ಮಾಡಿದರೆ ಜೀವನಕ್ಕೆ ಉಪಾಯ ಎಂಬಂತಾಗಿತ್ತು. ಆದರೆ, ಇಂದು ಭಾರತೀಯ ಜ್ಞಾನ ಪರಂಪರೆಗೆ ಹೊಸ ಆಯಾಮ ಸಿಕ್ಕಂತಾಗಿದೆ. ಸಂಸತದ ಬಗ್ಗೆ ಒಲವು ತೋರಿಸುತ್ತಿದ್ದಾರೆ. ಸಂಸತ ಕಲಿಯುವುದರಿಂದ ಸಾಕಷ್ಟು ಅನುಕೂಲವಿದ್ದು, ಇದು ಕರ್ನಾಟಕದ ಏಕೈಕ ಸಂಸ್ಕೃತ ವಿಶ್ವವಿದ್ಯಾಲಯ ಆಗಿದೆ.> ಪ್ರೊ.ಎಸ್​. ಅಹಲ್ಯಾಕುಲಪತಿಸಂಸ್ಕೃತ ವಿವಿ ಈ ಭಾಗದಲ್ಲಿ ಆರಂಭವಾಗಿರುವುದರಿಂದ ರಾಮನಗರ ಜಿಲ್ಲೆಗೆ ಹೆಮ್ಮೆಯ ವಿಷಯ. ಕರ್ನಾಟಕದಲ್ಲಿ ಇದು ಒಂದೇ ಸಂಸತ ವಿವಿ ಆಗಿರುವುದರಿಂದ ಹೆಚ್ಚಿನ ಮಕ್ಕಳು ಸಂಸತ ವಿದ್ಯಾಭ್ಯಾಸ ಮಾಡಲು ಅನುಕೂಲವಾಗುತ್ತದೆ. ವಿವಿ, ದೇಶಾಭಿಮಾನ ಮೂಡಿಸುವ ರೀತಿಯ ಸಂಸ್ಕಾರ ನೀಡಿ ಉತ್ತಮ ಪ್ರಜೆಯನ್ನಾಗಿ ಪರಿವರ್ತಿಸಲಿ. > ಡಾ. ವಿದ್ವಾನ್​ ಚಂದ್ರಶೇಖರ ಸ್ವಾಮೀಜಿಗುಮ್ಮಸಂದ್ರ ರುದ್ರಮುನೇಶ್ವರ ಮಠ