ಜಿಲ್ಲೆ

ಮಾನವೀಯ ಮೌಲ್ಯ ಕಲಿಸಿಕೊಟ್ಟ ಸಂಸ್ಕೃತ ಭಾಷೆ

ಲಲಾಟಾಕ್ಷ ಎಸ್

ಕೊಳ್ಳೇಗಾಲ: ಪಟ್ಟಣದ ಸರ್ಕಾರಿ ನ್ಯಾಷನಲ್ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸೋಮವಾರ ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯ, ಬೆಂಗಳೂರಿನ ಸಂಸ್ಕೃತ ಶಿಕ್ಷಣ ನಿರ್ದೇಶನಾಲಯ, ಕೊಳ್ಳೇಗಾಲದ ದಕ್ಷಿಣ ಬಡಾವಣೆ ಶ್ರೀ ಫಲಾಹಾರ ಪ್ರಭುದೇವಸ್ವಾಮಿ ಸಂಸ್ಕೃತ ಪಾಠ ಶಾಲೆ, ಸರ್ಕಾರಿ ನ್ಯಾಷನಲ್ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ ಸಹಯೋಗದಲ್ಲಿ ‘ಅಸ್ಮಾಕಂ ಸಂಸ್ಕೃತಮ್’ ಕಾರ್ಯಕ್ರಮ ಆಯೋಜಿಸಲಾಗಿತ್ತು.


ಸಂಸ್ಕೃತ ಶಾಲೆಯ ಮುಖ್ಯ ಶಿಕ್ಷಕ ಎಂ.ಪರಶಿವಮೂರ್ತಿ ಮಾತನಾಡಿ, ಜಗ್ಗತ್ತಿಗೆ ರಾಮಾಯಣ, ಮಹಾಭಾರತದಂತಹ ಮಹಾಕಾವ್ಯಗಳ ಮೂಲಕ ಮಾನವೀಯ ಮೌಲ್ಯಗಳನ್ನು ಮೌಲ್ಯಯುತವಾಗಿ ಕಲಿಸಿಕೊಟ್ಟ ಭಾಷೆ ಸಂಸ್ಕೃತ. ಜರ್ಮನ್ ತತ್ವಜ್ಞಾನಿ ಮ್ಯಾಕ್ಸ್‌ಮುಲ್ಲರ್ ಸಂಸ್ಕೃತ ಜಗ್ಗತ್ತಿನಲ್ಲೆ ಶ್ರೇಷ್ಠ ಭಾಷೆ ಎಂದಿದ್ದಾರೆ. 6 ಸಾವಿರ ವರ್ಷಗಳ ಇತಿಹಾಸವಿದ್ದು, ಎಲ್ಲರೂ ಸರಳವಾಗಿ ಸಂಸ್ಕೃತ ಕಲಿಯಬಹುದು ಎಂದರು.
ಮುಖ್ಯ ಶಿಕ್ಷಕಿ ಸುನೀತಾ ಮಾತನಾಡಿ, ಕನ್ನಡ, ಇಂಗ್ಲಿಷ್, ತಮಿಳು ಜತೆಗೆ ಸಂಸ್ಕೃತ ಭಾಷೆಯನ್ನು ಕಲಿಸುತ್ತಿರುವುದು ಹೆಮ್ಮೆಯ ವಿಚಾರವಾಗಿದೆ. ಸಂಸ್ಕೃತ ಕಲಿಸಲು ಉತ್ತಮ ಶಿಕ್ಷಕರಿದ್ದಾರೆ ಎಂದು ಹೇಳಿದರು.


ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಶ್ರೀಧರ್, ಸಿಆರ್‌ಪಿ ಸುಮೀರಾ ಖಾನಂ, ಬಿಆರ್‌ಪಿ ಅನಿತಾ, ಹಿರಿಯ ಶಿಕ್ಷಕಿ ಪುಷ್ಪಲತಾ, ಮಾತನಾಡಿದರು. ಉತ್ತಮ ಶಿಕ್ಷಕ ಪ್ರಶಸ್ತಿ ವಿಜೇತರಾದ ವೆಂಕಟಕೃಷ್ಣಯ್ಯ ಅವರನ್ನು ಸನ್ಮಾನಿಸಲಾಯಿತು.