ಜಿಲ್ಲೆ

ಸಂಸ್ಕೃತ ಭಾಷೆಗಿದೆ ಜೀವನ ದೈವತ್ವಕ್ಕೆ ಏರಿಸುವ ಶಕ್ತಿ

Gadag - Desk - Tippanna Avadoot

ಶಿರಸಿ: ದೇವಭಾಷೆ ಎಂದು ಕರೆಸಿಕೊಳ್ಳುವ ಸಂಸ್ಕೃತ ಕೇವಲ ದೇವರು ಮಾತನಾಡುವ ಭಾಷೆಯಲ್ಲ. ಸಾಮಾನ್ಯವಾದ ಜೀವನವನ್ನು ದೈವತ್ವಕ್ಕೆ ಏರಿಸುವ ಶಕ್ತಿ ಈ ಭಾಷೆಗಿದೆ. ಹಾಗಾಗಿಯೇ ಸಂಸೃ್ಕ ದೇವ ಭಾಷೆ ಎನಿಸಿಕೊಂಡಿದೆ ಎಂದು ವಿದ್ವಾನ ಉಮಾಕಂತ ಭಟ್ ಹೇಳಿದರು.

ನಗರದ ಮಾರಿಕಾಂಬಾ ಸರ್ಕಾರಿ ಪದವಿ ಪೂರ್ವ ಕಾಲೇಜ್​ನಲ್ಲಿ ಆಯೋಜಿಸಿದ್ದ ಪದವಿ ಪೂರ್ವ ಕಾಲೇಜುಗಳ ಸಂಸೃ್ಕ ಉಪನ್ಯಾಸಕರ ಎರಡು ದಿನಗಳ ಪುನಶ್ಚೇತನ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.

ಬೈಗುಳಗಳು ಇಲ್ಲದಿರುವ ಭಾಷೆ ಸಂಸೃ್ಕ. ಎಲ್ಲ ಕಾಲದಲ್ಲಿಯೂ ದಾಖಲಾಗಿರುವ ಪುರಾತನವಾದ ಹಾಗೂ ಬದಲಾಗದಿರುವ ಭಾಷೆ ಸಂಸೃ್ಕ. ಅಂತಹ ಸಂಸೃ್ಕದ ಅಧ್ಯಾಪಕರು ನಾವು ಎನ್ನುವ ಅಭಿಮಾನದಿಂದ ಮಗುವಿಗೆ ಬೋಧಿಸಿದಾಗ ಮಾತ್ರ ಮಕ್ಕಳಲ್ಲಿ ಉತ್ತಮ ವ್ಯಕ್ತಿತ್ವ ರೂಪಿಸಲು ಸಾಧ್ಯ. ಇಲ್ಲಿ ಸಂಖ್ಯೆ ಮುಖ್ಯವಲ್ಲ. ವಿಷಯದ ಬಗ್ಗೆ ಲಕ್ಷ್ಯವಿದ್ದಾಗ ಮಾತ್ರ ಅಂಕೆಗಳು ಲಕ್ಷವಾಗುತ್ತದೆ. ಅದರ ಬಗೆಗೆ ಗಮನವಿರಬೇಕು ಎಂದರು.

ಇಂದಿನ ವಿದ್ಯಾರ್ಥಿಗಳಲ್ಲಿ ಅಹಂಕಾರ ಮನೋಭಾವ ಅಧಿಕವಾಗಿದೆ. ಇಂದಿನ ಸಮಾಜದ ಪರಿಸ್ಥಿತಿಯಿಂದಾಗಿಯೇ ವಿದ್ಯಾರ್ಥಿಗಳಲ್ಲಿ ಅಹಂಕಾರ ಅಧಿಕವಾಗಿರಬಹುದು. ಈ ಕಾರಣದಿಂದಾಗಿ ಒಳ್ಳೆಯ ಶಿಕ್ಷಕ ಲಭ್ಯವಾಗಲು ಸಾಧ್ಯವಾಗುವುದಿಲ್ಲ. ವಿನಿತ ವಿದ್ಯಾರ್ಥಿ ಇಲ್ಲದೇ ಪ್ರಭಾವಿ ಶಿಕ್ಷಣ ಸಾಧ್ಯವಿಲ್ಲ. ಈ ಅಜ್ಞಾನ ಹಾಗೂ ಅಹಂಕಾರದಿಂದ ಜಾಡ್ಯ ಬರುತ್ತದೆ. ಪುನಶ್ಚೇತನ ಕಾರ್ಯಕ್ರಮ ಕೇವಲ ಅಧ್ಯಾಪಕರಿಗೆ ಮಾತ್ರವಲ್ಲ ವಿದ್ಯಾರ್ಥಿಗಳಲ್ಲೂ ಆಗಬೇಕು. ಉರಿಯುವ ದೀಪಕ್ಕೆ ಉರಿದು ಹೋಗುತ್ತಿದ್ದೇನೆ ಎನ್ನುವ ವ್ಯಥೆ ಇಲ್ಲ. ತಾನು ಉರಿದು ಕತ್ತಲೆಯನ್ನು ಕಳೆಯುತ್ತಾ ಸಾರ್ಥಕತೆ ಪಡೆದುಕೊಳ್ಳುತ್ತದೆ. ಆ ದೀಪ ಹಚ್ಚಿದವನಿಗೆ ಮಾತ್ರ ಎಣ್ಣೆ ಕಾಲಿಯಾಗುತ್ತದೆ ಎಂಬ ಯೋಚನೆ ಇರುತ್ತದೆ. ಹಾಗಾಗಿ ಉಪನ್ಯಾಸಕರು ದೀಪವಾಗಬೇಕು ಆಗ ಇಂತಹ ಶಿಬಿರಗಳು ಸಾರ್ಥಕತೆಯನ್ನು ಪಡೆದುಕೊಳ್ಳುತ್ತದೆ ಎಂದರು.

ಕಾಲೇಜು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಬಿ.ಕೆ. ಕೆಂಪರಾಜು ಮಾತನಾಡಿ, ಸಂಸೃ್ಕ ದ ಬಗ್ಗೆ ಇಂದು ತುಂಬಾ ವಿಷಯ ತಿಳಿದುಕೊಳ್ಳುವುದಿದೆ. ಇಂತಹ ಉತ್ತಮ ವಿಷಯವನ್ನು ವಿದ್ಯಾರ್ಥಿಗಳು ಅಧ್ಯಯನ ಮಾಡುವಲ್ಲಿ ಹಿಂದುಳಿಯುತ್ತಿದ್ದಾರೆ. ಸಾವಿರಾರು ವಿದ್ಯಾರ್ಥಿಗಳಿರುವ ಕಾಲೇಜುಗಳಲ್ಲಿಯೂ ಕೇವಲ ಶೇ. 10 ವಿದ್ಯಾರ್ಥಿಗಳು ಮಾತ್ರ ಸಂಸೃ್ಕ ತೆಗೆದುಕೊಳ್ಳುತ್ತಿದ್ದಾರೆ ಎನ್ನುವುದು ವಿಷಾದನೀಯ. ಇಂತಹ ಶಿಬಿರ ಮಾಡುವುದರಿಂದ ಹಲವು ಲಾಭಗಳಿವೆ ಎಂದರು.

ಶಾಲಾ ಶಿಕ್ಷಣದ ಉಪನಿರ್ದೇಶಕ ಸತೀಶ ನಾಯ್ಕ, ಡಾ.ಮಹೇಶ ಅಡಕೊಳಿ, ಡಾ. ವಿನಾಯಕ ಭಟ್, ನಾಗಪತಿ ಹೆಗಡೆ ಇತರರಿದ್ದರು.