ಮುರಗೋಡ: ಪ್ರಸ್ತುತ ದಿನಗಳಲ್ಲಿ ಮಠ-ಮಂದಿರಗಳ ಸತ್ಸಂಗಗಳಲ್ಲಿ ಎಲ್ಲರೂ ತೊಡಗಿಸಿಕೊಳ್ಳಬೇಕು. ಜಾತ್ರೆ, ಉತ್ಸವಗಳು ಸಮಾಜದಲ್ಲಿ ಸಂಸ್ಕೃತಿ ಹಾಗೂ ಸಂಸ್ಕಾರ ಸಾರುತ್ತಿವೆ ಎಂದು ಮುನವಳ್ಳಿ ಸೋಮಶೇಖರ ಮಠದ ಮುರುಘರಾಜೇಂದ್ರ ಸ್ವಾಮೀಜಿ ಹೇಳಿದರು.
ಗ್ರಾಮದ ಐತಿಹಾಸಿಕ ಗುಡ್ಡದ ಬಾವಿಯ ಶ್ರೀ ಸಿದ್ಧಿವಿನಾಯಕ ದೇವಸ್ಥಾನದಲ್ಲಿ ಹಮ್ಮಿಕೊಂಡಿದ್ದ ಮೂರ್ತಿ ಪ್ರತಿಷ್ಠಾಪನೆ 4ನೇ ವಾರ್ಷಿಕೋತ್ಸವ ಹಾಗೂ ಜಾತ್ರಾ ಮಹೋತ್ಸವದ ಕಾರ್ಯಕ್ರಮದಲ್ಲಿ ಮಾತನಾಡಿದರು.
ಮಹಾಂತ ದುರದುಂಡೇಶ್ವರ ಮಠದ ನೀಲಕಂಠ ಸ್ವಾಮೀಜಿ ಮಾತನಾಡಿ, ಬದುಕಿನಲ್ಲಿ ಕಷ್ಟ ಬಂದಾಗ ಮಾತ್ರ ದೇವರ ಸ್ಮರಣೆ ಮಾಡಿದರೆ ಸಾಲದು. ನಿತ್ಯ ಶ್ರದ್ಧಾ, ಭಕ್ತಿಯಿಂದ ದೇವರ ಆರಾಧನೆ ಮಾಡುವುದರಿಂದ ಸಂಕಷ್ಟಗಳು ದೂರಾಗುತ್ತದೆ ಎಂದು ತಿಳಿಸಿದರು. ಮುಜರಾಯಿ ಇಲಾಖೆಯ ಮಹಾಂತೇಶ ಆರಾದ್ರಿಮಠ ಮಾತನಾಡಿದರು. ಮಂಜುನಾಥ ಸ್ವಾಮಿ ಹಿರೇಮಠ ಶಾಸ್ತ್ರೀ ಪೂಜಾ ವಿಧಾನ ನೆರವೇರಿಸಿದರು. ಗಣ್ಯರನ್ನು ಸನ್ಮಾನಿಸಲಾಯಿತು.
ಗ್ರಾಪಂ ಅಧ್ಯಕ್ಷೆ ಸಂಕೇತಾ ಹಟ್ಟಿಹೊಳಿ, ಸಾಹಿತಿ ಮಹಾಂತೇಶ ನಂದಿಮಠ, ಗುರುಮಹಾಂತ ಹಿರೇಮಠ. ಕ್ಷೇತ್ರ ಸಮನ್ವಯಾಧಿಕಾರಿ ಬಸವರಾಜ ಬ್ಯಾಳಿ, ಡಾ.ಆರ್.ಎಸ್.ಬಾಳಿಕಾಯಿ, ನಿಂಗನಗೌಡ ಪಾಟೀಲ, ಮಹಾರುದ್ರಪ್ಪ ದಾಡಿಗುಂಡಿ, ಸುರೇಶ ಮ್ಯಾಕಲ್, ತಾಜುದ್ಧಿನ್ ದಡವಾಡ, ಹುಸೇನಸಾಬ ಅಸುಂಡಿ, ಪ್ರಕಾಶ ಮೂದೆನೂರ, ಮಹೇಶ ಹುಡೇದ, ನೀಲಕಂಠ ಕರಜಗಿ, ನೀಲಕಂಠ ಮೂದೆನೂರ, ರಾಜು ಬರಲಿ ಇತರರಿದ್ದರು.