ಜಿಲ್ಲೆ

ತಂದೆ-ತಾಯಿ, ಗುರುಗಳಿಗೆ ಗೌರವ ನೀಡಿ

ವಿರೂಪಾಕ್ಷಯ್ಯ ಗುದ್ನಯ್ಯನವರಮಠ

ಸಂಶಿ: ಇಲ್ಲಿನ ಕೆಎಲ್ಇ ಸಂಸ್ಥೆಯ ಕಾಲೇಜಿನಲ್ಲಿ ಶಿಕ್ಷಕರ ದಿನ ಆಚರಿಸಲಾಯಿತು. ಉಪನ್ಯಾಸಕ ಎಂ.ಎಂ. ಬುಡಶೆಟ್ಟಿ ಮಾತನಾಡಿ, ವಿದ್ಯಾರ್ಥಿಗಳು ಗುರುವಿನ ಮಹತ್ವ ಅರಿತುಕೊಂಡು, ಶ್ರದ್ಧೆಯಿಂದ ಶಿಕ್ಷಣ ಪಡೆಯಬೇಕು ಎಂದರು. ಅಧ್ಯಕ್ಷತೆ ವಹಿಸಿದ್ದ ಪ್ರೊ. ರಮೇಶ ಅತ್ತಿಗೇರಿ ಮಾತನಾಡಿ, ವಿದ್ಯಾರ್ಥಿಗಳು ಜೀವನದಲ್ಲಿ ತಂದೆ-ತಾಯಿ, ಗುರುಗಳಿಗೆ ಗೌರವ ಕೊಡುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದರು. ಎಸ್.ಸಿ. ಅಂಗಡಿ, ಜಿ.ಜೆ. ಕಟಗಿ, ಎನ್.ಎ. ಪೋಳ, ಸಿ.ಎಸ್. ಗುರುಮಠ, ಡಿ.ಬಿ. ಮುರಾರಿ, ಡಿ.ಸಿ. ಕರಿಗೇರ, ಡಿ.ಎಂ. ಹುಲಗಣ್ಣವರ ಇತರರು ಇದ್ದರು. ಸೌಜನ್ಯ ಮಾಲಿಗೌಡರ, ಯಶೋದಾ ಆಲೂರು, ಮಧು ಗುಡಗೇರಿ ನಿರ್ವಹಿಸಿದರು.