ಜಿಲ್ಲೆ

ಸನ್ನಸನ್ನಿ ಆಸ್ಪತ್ರೆಯಿಂದ ಉತ್ತಮ ಸೇವೆ

ಪ್ರಶಾಂತ ಹೂಗಾರ

ಹಾರೂಗೇರಿ: ಗ್ರಾಮೀಣ ಜನರಿಗೆ ಉತ್ತಮ ಆರೋಗ್ಯ ಸೇವೆ ಒದಗಿಸುವ ಸದುದ್ದೇಶದಿಂದ ಸನ್ನಸನ್ನಿ ಆಸ್ಪತ್ರೆ ನಿರ್ಮಿಸಿರುವ ಡಾ.ಯಲ್ಲಾಲಿಂಗ ಕಾರ್ಯ ಅನನ್ಯ. ಇಲ್ಲಿ ಜನರಿಗೆ ಉತ್ತಮ ವೈದ್ಯಕೀಯ ಸೇವೆ ಸಿಗಲಿ ಎಂದು ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಹೇಳಿದರು.

ಪಟ್ಟಣದ ಜತ್ತ-ಜಾಂಬೋಟಿ ರಸ್ತೆಯ ಪಕ್ಕದಲ್ಲಿ ಬುಧವಾರ ಪ್ರಾರಂಭಿಸಿದ ಸನ್ನಸನ್ನಿ ಆಸ್ಪತ್ರೆ ಉದ್ಘಾಟನೆ ನೆರವೇರಿಸಿ ಮಾತನಾಡಿ, ವೈದ್ಯರು ರೋಗಿಗಳೊಂದಿಗೆ ಪ್ರೀತಿ, ವಿಶ್ವಾಸದಿಂದ ನಡೆದುಕೊಂಡರೆ ರೋಗಿಯ ಅರ್ಧ ಕಾಯಿಲೆ ವಾಸಿಯಾಗುತ್ತದೆ ಎಂದರು. ಅಚಲೇರಿ-ಜಿಡಗಾಮಠದ ಬಸವರಾಜೇಂದ್ರ ಸ್ವಾಮೀಜಿ ಮಾತನಾಡಿ, ಆಸ್ಪತ್ರೆ ಉತ್ತರೋತ್ತರವಾಗಿ ಬೆಳೆಯಲಿ ಎಂದು ಹಾರೈಸಿದರು. ಡಾ.ಎಲ್.ಎಸ್.ಜಂಬಗಿ ಮಾತನಾಡಿ, ಹಾರೂಗೇರಿ ಶೈಕ್ಷಣಿಕ, ಆರ್ಥಿಕ ಹಾಗೂ ರಾಜಕೀಯವಾಗಿ ಬೆಳೆಯುತ್ತಿರುವುದು ಹೆಮ್ಮೆ. ಸನ್ನಸನ್ನಿ ಆಸ್ಪತ್ರೆಯಲ್ಲಿ ರೋಗಿಗಳಿಗೆ ಉತ್ತಮ ಚಿಕಿತ್ಸೆ ದೊರೆಯಲಿದೆ ಎಂದರು.

ಸನ್ನಸನ್ನಿ ಆಸ್ಪತ್ರೆ ವೈದ್ಯ ಡಾ.ಯಲ್ಲಾಲಿಂಗ ಸನ್ನಸನ್ನಿ ಮಾತನಾಡಿದರು. ಕುಡಚಿ ಶಾಸಕ ಮಹೇಂದ್ರ ತಮ್ಮಣ್ಣವರ, ಹಿರಿಯರಾದ ಡಿ.ಸಿ.ಸದಲಗಿ, ಪಾಂಡುರಂಗ ಲಮಾಣಿ, ಬಾಬು ಹಳ್ಳೂರ, ಐ.ಆರ್.ಕೊಕಟನೂರ, ಡಾ.ಗಿರೀಶ ನಾರಗೊಂಡ, ಡಾ.ಸಂಜೀವ ಪಾಟೀಲ, ಭೀಮಗೌಡ ಕರ್ಣವಾಡಿ, ಪುರಸಭೆ ಅಧ್ಯಕ್ಷ ವಸಂತ ಲಾಳಿ, ಶ್ರೀಶೈಲ ಪಾಟೀಲ, ಶ್ರೀಧರ ಮೂಡಲಗಿ ಇತರರಿದ್ದರು. ರಮೇಶ ಘಂಟಿ ಸ್ವಾಗತಿಸಿದರು, ಸುನೀಲ ಕಬ್ಬೂರ ನಿರೂಪಿಸಿದರು.