ಮೂಡಲಗಿಯಲ್ಲಿ ವಾಲ್ಮೀಕಿ ಜಯಂತಿ ನಿಮಿತ್ತ ಸಾಧಕ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಶಿವಾನಂದ ಬಬಲಿ, ಎ್.ಜಿ.ಚಿನ್ನನವರ, ಅಜಿತ ಮನ್ನಿಕೇರಿ, ಡಾ. ಭಾರತಿ ಕೋಣಿ ಇತರರಿದ್ದರು. 
ಜಿಲ್ಲೆ

ಸನ್ಮಾರ್ಗದತ್ತ ಕೊಂಡೊಯ್ಯುವ ಮಹಾಕಾವ್ಯ

ರಾಘವೇಂದ್ರಗೌಡ ಭೀ ಪಾಟೀಲ್

ಮೂಡಲಗಿ: ಮಹಾಕವಿ ವಾಲ್ಮೀಕಿ ರಾಮಾಯಣ ಸನ್ಮಾರ್ಗದತ್ತ ಕೊಂಡೊಯ್ಯುವ ಮಹಾಕಾವ್ಯ. ಅವರ ಆದರ್ಶಗಳನ್ನು ಪ್ರತಿಯೊಬ್ಬರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಪ್ರೌಢಶಾಲೆ ಶಿಕ್ಷಕ ಡಿ.ಪಿ. ದಾಸನ್ನವರ ಕರೆ ನೀಡಿದರು.

ಪಟ್ಟಣದ ತಹಸೀಲ್ದಾರ್ ಕಾರ್ಯಾಲಯದ ಸಭಾಭವನದಲ್ಲಿ ತಾಲೂಕಾಡಳಿತ, ತಾಪಂ, ಪುರಸಭೆ ಹಾಗೂ ಪರಿಶಿಷ್ಟ ವರ್ಗಗಗಳ ಕಲ್ಯಾಣ ಇಲಾಖೆ ಆಶ್ರಯದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.

2023-24ನೇ ಸಾಲಿನಲ್ಲಿ ಎಸ್‌ಎಸ್‌ಎಲ್‌ಸಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ಸಮುದಾಯದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ತಹಸೀಲ್ದಾರ್ ಶಿವಾನಂದ ಬಬಲಿ, ತಾಪಂ ಇಒ ಎ್.ಜಿ.ಚಿನ್ನನವರ, ಸಿಡಿಪಿಒ ಯಲ್ಲಪ್ಪ ಗದಾಡಿ, ಬಿಇಒ ಅಜಿತ ಮನ್ನಿಕೇರಿ, ಅಧಿಕಾರಿಗಳಾದ ಎಂ.ಎಸ್. ನಾಗನ್ನವರ, ತುಕ್ಕಾರಾಮ ಮಾದರ, ಡಾ. ಭಾರತಿ ಕೋಣಿ, ಸಂಜು ಸವಸುದ್ದಿ, ಎಸ್.ಕೆ.ಆಸಂಗಿ, ಪುರಸಭೆ ಅಧ್ಯಕ್ಷೆ ಖುರ್ಶಾದ್ ನದ್ಾ, ಉಪಾಧ್ಯಕ್ಷೆ ಭೀಮವ್ವ ಪೂಜೇರಿ, ಬಿಡಿಸಿಸಿ ಉಪಾಧ್ಯಕ್ಷ ಸುಭಾಸ ಢವಳೇಶ್ವರ, ಭರತೇಶ ಬೋಳಿ, ಎ.ಜಿ.ಕೋಳಿ ಇತರರಿದ್ದರು.