ಜಿಲ್ಲೆ

ಸಮಾಜಮುಖಿಗಳಿಗೆ ಪ್ರೋತ್ಸಾಹ ಅಗತ್ಯ: ಸಚಿವ ಎನ್.ಚಲುವರಾಯಸ್ವಾಮಿ ಕಿವಿಮಾತು

ಕೆ.ಎನ್.ರಾಘವೇಂದ್ರ

ಮಂಡ್ಯ: ಸಮಾಜಮುಖಿ ಕೆಲಸ ಮಾಡುವವರಿಗೆ ಪ್ರೋತ್ಸಾಹ ಕೊಡುವುದು ಎಲ್ಲರ ಕರ್ತವ್ಯ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎನ್. ಚಲುವರಾಯಸ್ವಾಮಿ ಹೇಳಿದರು.

ನಗರದ ಅಗ್ರಿಕ್ಲಬ್ ಆವರಣದಲ್ಲಿ ಆಯೋಜಿಸಿದ್ದ ಭಾವಜೀವಿಯ ತ್ಯಾಗಜೀವಿ ಟ್ರಸ್ಟ್‌ನ 16ನೇ ವಾರ್ಷಿಕೋತ್ಸವ, ಆರೋಗ್ಯ ಉಚಿತ ತಪಾಸಣಾ ಶಿಬಿರ, ಪ್ರತಿಭಾವಂತ ಕ್ರೀಡಾಪಟುಗಳಿಗೆ ಸನ್ಮಾನ ಹಾಗೂ ವಿದ್ಯಾರ್ಥಿಗಳಿಗೆ ಧನಸಹಾಯ, ಕಲಿಕಾ ಸಾಮಗ್ರಿ ವಿತರಣಾ ಸಮಾರಂಭ ಉದ್ಘಾಟಿಸಿ ಮಾತನಾಡಿದರು. ಅಂಗವಿಕಲರು ಹಾಗೂ ಸಮಾಜದಲ್ಲಿ ಅಗತ್ಯ ಇರುವವರಿಗೆ ಸರ್ಕಾರದಿಂದ ನೀಡುವ ಸೌಲಭ್ಯದ ಜತೆಗೆ ಸಂಘ ಸಂಸ್ಥೆಗಳು, ಮಠಗಳು ಕೈಜೋಡಿಸಿದಾಗ ಮತ್ತಷ್ಟು ಸೌಲಭ್ಯಗಳನ್ನು ಕಲ್ಪಿಸಬಹುದು ಎಂದರು.

ವಿ.ಸಿ ಫಾರ್ಮ್ ಕೀಟಶಾಸ ಪ್ರಾಧ್ಯಾಪಕ ಡಾ.ಎಚ್.ವಿಜಯಕುಮಾರ್ ಮಾತನಾಡಿ, ರೈತರು ಕೃಷಿಯಲ್ಲಿ ಸ್ವಾವಲಂಬಿ ಕಂಡುಕೊಳ್ಳಬೇಕು. ಕೃಷಿ ವಿಷಯಗಳಿಗೆ ಸಲಹೆ ಕೇಳಿಕೊಂಡು ಇಳುವರಿ ಹೆಚ್ಚಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಮೈಸೂರು ಅಮ್ಮ ಅಮೃತ ಕೃಪೆ ಆಸ್ಪತ್ರೆಯ ರಾಮಕೃಷ್ಣ ಸ್ವಾಮೀಜಿ ಆಶೀರ್ವಚನ ನೀಡಿದರು.ಮಂಡ್ಯ ಶಾಸಕ ರವಿಕುಮಾರ್ ಗಣಿಗ, ಟ್ರಸ್ಟ್ ಅಧ್ಯಕ್ಷ ದರ್ಶಿತ್ ಮಹೇಶ್, ಕಾರ್ಯದರ್ಶಿ ರಮೇಶ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಿ.ಡಿ.ಗಂಗಾಧರ ಇತರರಿದ್ದರು.

ಇದೇ ವೇಳೆ ಪ್ರಾಧ್ಯಾಪಕ ಡಾ.ಎಚ್.ವಿಜಯಕುಮಾರ್, ಉರಗ ಸಂರಕ್ಷಕ ಸ್ನೇಕ್ ನಾರಾಯಣ್ ಮತ್ತು ನಾಟಿವೈದ್ಯ ದರಸಗುಪ್ಪೆ ಸಿ.ಸ್ವಾಮಿ ಅವರನ್ನು ಸನ್ಮಾನಿಸಲಾಯಿತು.