ವಿಜಯವಾಣಿ ಸುದ್ದಿಜಾಲ ರಾಯಬಾಗ
ತಾಲೂಕಿನ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘಗಳ ಆಡಳಿತ ಮಂಡಳಿ ಹಾಗೂ ಸಿಬ್ಬಂದಿ ಸಹಕಾರದಿಂದ ಸತತ ಮೂರು ವರ್ಷಗಳಿಂದ ರಾಯಬಾಗ ತಾಲೂಕು ಜಿಲ್ಲೆಯಲ್ಲಿಯೇ ಅತಿ ಹೆಚ್ಚು ಕಷಿಯೇತರ ಸಾಲ ಪಡೆದು ಪ್ರಥಮ ಸ್ಥಾನದಲ್ಲಿದೆ ಎಂದು ಬೆಳಗಾವಿ ಡಿಸಿಸಿ ಬ್ಯಾಂಕಿನ ಅಧ್ಯಕ್ಷ ಅಪ್ಪಾಸಾಹೇಬ ಕುಲಗುಡೆ ತಿಳಿಸಿದರು.
ಪಟ್ಟಣದ ಸಿದ್ದೇಶ್ವರ ಸಭಾಭವನದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಕೃಷಿಯೇತರ ಸಾಲ ನೀಡಲು ಸಹಕಾರ ನೀಡಿದ ತಾಲೂಕಿನ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕಷಿ ಸಹಕಾರ ಸಂಘಗಳ ಅಧ್ಯಕ್ಷರು, ಆಡಳಿತ ಮಂಡಳಿ ಸದಸ್ಯರು ಹಾಗೂ ಸಂಘದ ಮುಖ್ಯಕಾರ್ಯನಿರ್ವಾಹಕರಿಗೆ ಸನ್ಮಾನಿಸಿ, ಬಹುಮಾನ ವಿತರಿಸಿ ಮಾತನಾಡಿದರು.
ಬ್ಯಾಂಕಿನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸುರೇಶ ಅಳಗೂಂಡಿ ಮಾತನಾಡಿ, ಬಿಡಿಸಿಸಿ ಬ್ಯಾಂಕ್‌ನಲ್ಲಿ ಕಷಿ ಸಾಲದ ಜತೆ ಕಷಿಯೇತರ ಸಾಲ ಯೋಜನೆ ಜಾರಿಯಲ್ಲಿದ್ದು, ಮೂರು ವರ್ಷಗಳಿಂದ 34.70 ಕೋಟಿ ರೂ. ಕಷಿಯೇತರ ಸಾಲ ಹಂಚುವಲ್ಲಿ ಮುಂಚೂಣಿಯಲ್ಲಿದೆ ಎಂದರು.
ಪ್ರಧಾನ ವ್ಯವಸ್ಥಾಪಕ ಎನ್.ಜಿ. ಕಲಾವಂತ, ಸಾಲಗಳ ಮತ್ತು ಆರ್ಥಿಕ ವ್ಯವಹಾರಗಳ ಉಪಪ್ರಧಾನ ವ್ಯವಸ್ಥಾಪಕ ಶಿವಪುತ್ರ ಬಾಗೇವಾಡಿ, ಸುನೀಲ ಪಾಟೀಲ, ಅರುಣ ಕಲ್ಮಟ, ಈರಣ್ಣ ನಾಲವಗಟ್ಟಿ, ಶಂಕರ ಶೆಟ್ಟಿಮನಿ, ಸಹಕಾರ ಅಭಿವೃದ್ಧಿ ಅಧಿಕಾರಿ ಶಂಕರ ಕರಬಸಣ್ಣವರ, ಶಿವಾನಂದ ಪಾಟೀಲ, ಬ್ಯಾಂಕ್ ನಿರೀಕ್ಷಕರಾದ ನಿಂಗರಾಜ ಕರೆನ್ನವರ, ಮಂಜುನಾಥ ಜಂಬಗಿ, ಸುಧೀರ ನಂದಗಾಂವ, ಭರತ ಬಾಬನ್ನವರ, ಚಿದಾನಂದ ಬನಶಂಕರಿ, ತಾಲೂಕಿನ ಪಿಕೆಪಿಎಸ್‌ಗಳ ಅಧ್ಯಕ್ಷರು, ಆಡಳಿತ ಮಂಡಳಿ ಸದಸ್ಯರು, ಮುಖ್ಯಕಾರ್ಯನಿರ್ವಾಹಕರು ಇತರರಿದ್ದರು. ಶ್ರೀಧರ ಪಾಟೀಲ ಸ್ವಾಗತಿಸಿದರು. ಮಹಾಲಿಂಗ ಮರಡಿ ನಿರೂಪಿಸಿ, ವಂದಿಸಿದರು.