ಕುಶಾಲನಗರ:
ಕೂಡುಮಂಗಳೂರು ಗ್ರಾಮ ಪಂಚಾಯತಿ ಸಭಾಂಗಣದಲ್ಲಿ ಗಾಂಧಿ ಜಯಂತಿ ಕಾರ್ಯಕ್ರಮವನ್ನು ಅಧ್ಯಕ್ಷ ಭಾಸ್ಕರ್ ನಾಯಕ್ ಅಧ್ಯಕ್ಷತೆಯಲ್ಲಿ ಗುರುವಾರ ಆಚರಿಸಲಾಯಿತು.
ಇದೇ ವೇಳೆ ಸ್ವಚ್ಛತಾ ಇ ಸೇವಾ 2025 ಅಂಗವಾಗಿ ಪೌರಕಾರ್ಮಿಕರಿಗೆ ಸನ್ಮಾನ ಕಾರ್ಯಕ್ರಮ ನಡೆಸಲಾಯಿತು. ಈ ಕುರಿತು ಮಾತನಾಡಿದ ಭಾಸ್ಕರ್ ನಾಯಕ್ ಪೌರಕಾರ್ಮಿಕರ ಕರ್ತವ್ಯ ಹಾಗೂ ಸಮಾಜ ಸೇವೆ ಗುರುತಿಸಬೇಕು.
ಪಂಚಾಯಿತಿಯ ಸ್ವಚ್ಛತೆಗೆ ಪೌರಕಾರ್ಮಿಕರು ಬೆನ್ನೆಲುಬಾಗಿದ್ದು ಅವರು ಅವರ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು ಎಂದರು. ಈ ಸಂದರ್ಭ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸಂತೋಷ್, ಸದಸ್ಯೆ ಫಿಲೋಮಿನಾ ಜಾರ್ಜ್, ಸಿಬ್ಬಂದಿ ವರ್ಗ, ಪೌರಕಾರ್ಮಿಕರು ಉಪಸ್ಥಿತರಿದ್ದರು.