ಕುಶಾಲನಗರ:
ಶಿಕ್ಷಕರ ದಿನಾಚರಣೆ ಹಿನ್ನೆಲೆಯಲ್ಲಿ ಕುಶಾಲನಗರದ ವಾಸವಿ ಬಾಲಕಿಯರ ಸಂಘದ ವತಿಯಿಂದ ಸೋಮೇಶ್ವರ ಬಡಾವಣೆಯ ನಿವಾಸಿ ನಿವೃತ್ತ ಶಿಕ್ಷಕ ನಾಗಾಚಾರಿ ಅವರನ್ನು ಅವರ ಮನೆಯಲ್ಲಿ ಸನ್ಮಾನಿಸಿ ಗೌರವಿಸಲಾಯಿತು.
ಬಾಲಕಿಯರ ಸಂಘದ ಅಧ್ಯಕ್ಷೆ ಸಾನ್ವಿ, ಪದಾಧಿಕಾರಿಗಳಾದ ಶ್ರಾವ್ಯ, ತನಿಷಾ, ನಿಹಾರಿಕಾ, ಸಾಯಿ ನಿಹಿರಾ, ಭೂಮಿ ಮತ್ತಿತರರು ಇದ್ದರು.