ಜಿಲ್ಲೆ

ಕಾವ್ಯ ಆಕರ್ಷಕ ಮಾಧ್ಯಮ: ಸಾಹಿತಿ ಗುಬ್ಬಿಗೂಡು ರಮೇಶ್ ಅಭಿಪ್ರಾಯ

ಮಂಡ್ಯ: ಕಾವ್ಯ ಆಕರ್ಷಕವಾಗಿ ಸೆಳೆಯುವ ಮಾಧ್ಯಮ. ಈ ಮಹಾ ಕಾವ್ಯಕ್ಕೆ ಪಂಪ, ರನ್ನರಾದಿಯಾಗಿ ಪ್ರಾಚೀನ ಕವಿಗಳೆಲ್ಲರೂ ತಮ್ಮನ್ನು ತಾವು ಒಪ್ಪಿಸಿಕೊಂಡಿದ್ದಾರೆ ಎಂದು ಸಾಹಿತಿ ಗುಬ್ಬಿಗೂಡು ರಮೇಶ್ ಹೇಳಿದರು.

ನಗರದ ಕಸಾಪ ಕನ್ನಡ ಭವನದಲ್ಲಿ ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಘಟಕದಿಂದ ಆಯೋಜಿಸಿದ್ದ ಸಂಕ್ರಾಂತಿ ಕವಿಗೋಷ್ಠಿ ಉದ್ಘಾಟಿಸಿ ಮಾತನಾಡಿ, ಕವಿಯಾದವನೇ ಅನಭಿಷಿಕ್ತ ಶಾಸಕ ಎಂದರೆ ತಪ್ಪಾಗಲಾರದು. ಶಾಸಕರಿಗೆ ಇತಿ-ಮಿತಿ ಇರುತ್ತದೆ. ಆದರೆ, ಕವಿಗಳಿಗೆ ಯಾವ ಇತಿ-ಮಿತಿಯೂ ಇರುವುದಿಲ್ಲ. ಎಲ್ಲದರ ಬಗ್ಗೆಯೂ ಮಾತನಾಡಬಹುದು ಎಂದರು.

ಕಸಾಪ ಮಾಜಿ ಅಧ್ಯಕ್ಷ ಪ್ರೊ.ಜಿ.ಟಿ.ವೀರಪ್ಪ ಅಧ್ಯಕ್ಷತೆ ವಹಿಸಿದ್ದರು. ಕಸಾಪ ಮಾಜಿ ಅಧ್ಯಕ್ಷೆ ಡಾ.ಮೀರಾ ಶಿವಲಿಂಗಯ್ಯ ಆಶಯನುಡಿಗಳನ್ನಾಡಿದರು. ಮಾಜಿ ಅಧ್ಯಕ್ಷ ಎಂ.ವಿ. ಧರಣೇಂದ್ರಯ್ಯ ಕವಿಗಳಿಗೆ ನೆನಪಿನ ಕಾಣಿಕೆ ನೀಡಿದರು. ಹರ್ಷ ಪಣ್ಣೇದೊಡ್ಡಿ, ಚಂದ್ರಲಿಂಗು ಇತರರಿದ್ದರು.