ಜಿಲ್ಲೆ

ಅಲ್ಲಂಭವನದಲ್ಲಿ ಸಂಕ್ರಾಂತಿ ಹಬ್ಬದ ಊಟ ಆರಂಭ

ಬಳ್ಳಾರಿ : ಇಲ್ಲಿನ ಅಲ್ಲಂಭವನದ ಗೋಕುಲಂ ಪಾರ್ಕ್‌ನಲ್ಲಿ ಗುರುವಾರ ಹಮ್ಮಿಕೊಂಡಿದ್ದ ಸಂಕ್ರಾಂತಿ ಹಬ್ಬದ ಊಟಕ್ಕೆ ರಾಬರ್ಟ್ ಬ್ರೂಸ್‌ಪುಟ್ ಸಂಗನಕಲ್ಲು ಪುರಾತತ್ವ ವಸ್ತು ಸಂಗ್ರಹಾಲಯದ ತಾಂತ್ರಿಕ ಸಹಾಯಕಿ ಗೌರಿ ಗುರುವಾರ ಚಾಲನೆ ನೀಡಿದರು.

ಬಳಿಕ ಮಾತನಾಡಿದ ಅವರು, ಇತ್ತೀಚಿನ ದಿನಗಳಲ್ಲಿ ವಿವಿಧ ಕೆಲಸಗಳ ಒತ್ತಡದಿಂದ ಕುಟುಂಬದ ಸಮೇತ ಹಳ್ಳಿಗಳಿಗೆ ತೆರಳಿ ಹಬ್ಬದ ಊಟ ಸವಿಯುವುದು ಬಹಳ ವಿರಾಳವಾಗಿದೆ. ಆದ್ದರಿಂದ, ಅಲ್ಲಂಭವನದಲ್ಲಿ ಹಳ್ಳಿ ಸೊಗಡಿನಲ್ಲಿ ಸಂಕ್ರಾಂತಿ ಹಬ್ಬದ ಊಟವನ್ನು ತಯಾರು ಮಾಡಿ ಬಡಿಸುವ ವಿಧಾನ ಬಹಳ ಮೆಚ್ಚುಗೆಗೆ ಪಾತ್ರವಾಗಿದೆ. ಪ್ರತಿಯೊಬ್ಬರು ಸಂಕ್ರಾಂತಿ ಹಬ್ಬದ ಊಟ ಸವಿಯಲು ಒಂದು ಸಾರಿ ಭೇಟಿ ನೀಡಿ ಎಂದು ಮನವಿ ಮಾಡಿದರು. ನಂತರ ಸಂಕ್ರಾಂತಿ ಹಬ್ಬದ ಊಟದ ವಿವಿಧ ರೀತಿಯ ಖಾದ್ಯಗಳು ಸವಿದು ಆನಂದಿಸಿದರು.

ಜ.9 ರಿಂದ ಜ.19 ರವರೆಗೆ ಸಂಕ್ರಾಂತಿ ನಿಮಿತ್ತ ಮನೆಯ ತಿಂಡಿ ‘ಸಂಕ್ರಾಂತಿ ಹಬ್ಬದ ರುಚಿಕರ ಊಟ’ ನಡೆಯಲಿದೆ. ಇದರಲ್ಲಿ ವಿಶೇಷ ಉತ್ತರ ಕರ್ನಾಟಕದ ವಿಶೇಷ ಖಾದ್ಯಗಳು ಹೊಂದಿವೆ. ಅಲ್ಲದೆ, ವಿವಿಧ ಸಿರಿಧಾನ್ಯಗಳ ರೊಟ್ಟಿ, ಪುಡಿಗಳು, ಶೇಂಗಾ ಮತ್ತು ಎಳ್ಳು ಹೋಳಿಗೆ, ತುಂಬಿದ ಗಾಯಿ, ಮೆಣಸಿನಕಾಯಿ ಪಲ್ಯ, ಉಂಡೆ ಕಡುಬು, ಕಾಳುಗಳು ದೊರೆಯುತ್ತವೆ.

ಕಡಕ್ ಮೃದು ರಾಗಿ ರೊಟ್ಟಿಗಳು ಅನಿಯಮಿತ ಸೇವೆಗಾಗಿ ಒಬ್ಬರಿಗೆ 250 ರೂ. ಹಾಗೂ ಚಿಕ್ಕ ಮಕ್ಕಳಿಗೆ 150 ರೂ. ದರ ನಿಗದಿಪಡಿಸಲಾಗಿದೆ. ಗುಲ್ಲಡ್ಕಿ ಉಂಡೆ ಇಳ್ಕಲ್, ಕಾನ್ ಬ್ಲೌಸ್‌ಪೀಸ್ ಎಳ್ಳು, ಶೇಂಗಾ ಹೋಳಿಗೆ ಕಡಕ್ ಮತ್ತು ಮೃದು ರೊಟ್ಟಿ ಕಾನ್ ಬ್ಲೌಸ್ ಪೀಸಸ್ ಮಾರಾಟ ಮಾಡಲಾಗುವುದು. ಮಧ್ಯಾಹ್ನ 12 ರಿಂದ 3.45 ರವರೆಗೆ ಸೇವೆ ನೀಡಲಾಗುವುದು.