ಜಿಲ್ಲೆ

ಸಂಕ್ರಾ೦ತಿ ಸಹಭೋಜನ

ಮಂಜುನಾಥ ಅಂಗಡಿ

ಧಾರವಾಡ: ಮಕರ ಸಂಕ್ರಾ೦ತಿ ಹಬ್ಬವನ್ನು ಜಿಲ್ಲೆಯಾದ್ಯಂತ ಸೋಮವಾರ ಸಂಭ್ರಮದಿAದ ಆಚರಿಸಲಾಯಿತು. ಹಬ್ಬದ ಅಂಗವಾಗಿ ನಗರದ ಉದ್ಯಾನಗಳಲ್ಲಿ ಜನರಿಂದ ಗಿಜಿಗುಡುತ್ತಿದ್ದವು.
ಜನ ಕುಟುಂಬ ಸದಸ್ಯರೊಂದಿಗೆ ಹಬ್ಬದೂಟದೊಂದಿಗೆ ಉದ್ಯಾನಗಳಿಗೆ ತೆರಳಿದ್ದರು. ಹಬ್ಬದ ವಿಶೇಷ ತಿಂಡಿ- ತಿನಿಸುಗಳನ್ನು ಸವಿದು ಸಂಭ್ರಮಿಸಿದರು. ಹಬ್ಬದ ವಿಶೇಷತೆಗಳಾದ ಸಜ್ಜೆ ರೊಟ್ಟಿ, ಮಾದಲಿ, ತರಹೇವಾರಿ ಅನ್ನ, ವಿವಿಧ ಪಲ್ಯ, ಸಿಹಿ ಪದಾರ್ಥಗಳನ್ನು ಸವಿದರು. ಹಬ್ಬದ ಅಂಗವಾಗಿ ರಜೆ ಇದ್ದುದರಿಂದ ಜನ ಕುಟುಂಬ ಸಮೇತರಾಗಿ ಉದ್ಯಾನಗಳಲ್ಲಿ ಕುಳಿತು ಊಟ ಸವಿದರು. ಶಾಲೆಗಳಿಗೆ ರಜೆ ಇದ್ದ ಕಾರಣ ಮಕ್ಕಳು ಉದ್ಯಾನಗಳಲ್ಲಿ ಆಟಗಳನ್ನಾಗಿ ಸಂಭ್ರಮಿಸಿದರು.