ಜಿಲ್ಲೆ

ಬಾಲಕಲ್ಯಾಣ ಕೇಂದ್ರದಲ್ಲಿ ಸಂಕ್ರಾಂತಿ

Dharwada - Basavaraj Idli

ಹುಬ್ಬಳ್ಳಿ: ಇಲ್ಲಿಯ ಸೇವಾ ಭಾರತಿ ಸಂಸ್ಥೆಯ ಮಾತೃಛಾಯಾ ಬಾಲ ಕಲ್ಯಾಣ ಕೇಂದ್ರದಲ್ಲಿ ಸಂಕ್ರಾಂತಿ ಅಂಗವಾಗಿ ಮಕ್ಕಳಿಗೆ ಕರಿ ಎರೆಯುವ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಮಹಿಳೆಯರಿಗೆ ಅರಿಶಿಣ ಕುಂಕುಮ ಜತೆ ಸಂಪ್ರದಾಯದಂತೆ ಎಳ್ಳು ಬೆಲ್ಲ ನೀಡಲಾಯಿತು.

ಅತಿಥಿಯಾಗಿದ್ದ ಸೌಮ್ಯಪ್ರಭು ಅವರು, ಸಂಕ್ರಾಂತಿ ಮಹತ್ವ ಹಾಗೂ ಕರಿ ಎರೆಯುವ ಕುರಿತು ಮಾಹಿತಿ ನೀಡಿದರು. ಹಬ್ಬಗಳ ವಿಶೇಷತೆ ಕಡಿಮೆಯಾಗುತ್ತಿರುವ ಈ ಸಂದರ್ಭದಲ್ಲಿ ಬಾಲಕಲ್ಯಾಣ ಕೇಂದ್ರದಲ್ಲಿ ಕರಿ ಎರೆಯುವ ಮೂಲಕ ಹಬ್ಬಗಳ ಮಹತ್ವ ತಿಳಿಸಿದಂತಾಗಿದೆ ಎಂದರು.

ಭಾರತಿ ನಂದಕುಮಾರ, ಕರಣಾ ಭಂಡಾರಿ, ಅಶ್ವಿನಿ ಜೋಶಿ, ಇತರರು ಇದ್ದರು.
ಬಾಲ ಕಲ್ಯಾಣ ಕೇಂದ್ರದ ಅಧ್ಯೆ ಕಮಲಾ ಜೋಶಿ ಪ್ರಾಸ್ತಾವಿಕ ಮಾತನಾಡಿದರು. ರತ್ನಾ ಮಾತಾಜಿ ಕಾರ್ಯಕ್ರಮ ನಿರ್ವಹಿಸಿದರು.