ಜಿಲ್ಲೆ

ಬೇಲೂರಿನಲ್ಲಿ ‘ಸಂಕ್ರಾಂತಿ ಸುಗ್ಗಿ ಸಂಭ್ರಮ’

ಎ. ಆರ್. ರಘುರಾಮ

ಬೇಲೂರು: ಪುಷ್ಪಗಿರಿ ಗ್ರಾಮೀಣಾಭಿವೃದ್ಧಿ ಮಹಿಳಾ ಸ್ವಸಹಾಯ ಸಂಘದ ಸದಸ್ಯರು ಸಂಕ್ರಾಂತಿ ಹಬ್ಬ ಆಗಮನದ ಹಿನ್ನೆಲೆಯಲ್ಲಿ ‘ಸಂಕ್ರಾಂತಿ ಸುಗ್ಗಿ ಸಂಭ್ರಮ’ ವನ್ನು ಸಡಗರದಿಂದ ಪಟ್ಟಣದ ವೀರಶೈವ ಕಲ್ಯಾಣ ಮಂಟಪದಲ್ಲಿ ಸೋಮವಾರ ಆಚರಿಸಿದರು.
ಸಂಸ್ಥೆ ಯೋಜನಾಧಿಕಾರಿ ವಿನುತಾ ಈ ಸಂದರ್ಭ ಮಾತನಾಡಿ, ಪುಷ್ಪಗಿರಿ ಮಠದ ಶ್ರೀ ಸೋಮಶೇಖರ ಶಿವಾಚಾರ್ಯ ಸ್ವಾಮೀಜಿ ಮಾರ್ಗದರ್ಶನದಲ್ಲಿ ಪುಷ್ಪಗಿರಿ ಗ್ರಾಮೀಣಾಭಿವೃದ್ಧಿ ಸಂಸ್ಥೆ ರಾಜ್ಯದ ಹತ್ತು ಜಿಲ್ಲೆಗಳಲ್ಲಿ ಸಾವಿರಾರು ಮಹಿಳಾ ಸ್ವ ಸಹಾಯ ಸಂಘ ಸ್ಥಾಪಿಸಿದೆ. ಈ ಮೂಲಕ ಮಹಿಳಾ ಸಬಲೀಕರಣಕ್ಕೆ ಮುಂದಾಗಿದೆ. ಸ್ವ ಸಹಾಯ ಸಂಘದ ಸದಸ್ಯರಿಗೆ ಹಣಕಾಸು ವಹಿವಾಟು, ಸ್ವ ಉದ್ಯೋಗಕ್ಕಾಗಿ ಕೌಶಲಾಭಿವೃದ್ದಿ ತರಬೇತಿ ಮತ್ತು ಕಾರ್ಯಾಗಾರ ನಡೆಸಿದೆ.ರಾಷ್ಟ್ರೀಯ ಹಬ್ಬಗಳ ಆಚರಣೆ ಮತ್ತು ಮಹಾ ಪುರುಷರ ಸಂಸ್ಮರಣೆ ಆಯೋಜಿಸಿ ನಮ್ಮ ಸಾಂಸ್ಕೃತಿಕ ಹಿರಿಮೆಯನ್ನು ಎತ್ತಿ ಹಿಡಿಯಲಯ ಯತ್ನ ಮಾಡಿದೆ. ಸಂಕ್ರಾಂತಿ ಸುಗ್ಗಿ ಸಂಭ್ರಮ ಎಲ್ಲೆಡೆ ಪಸರಿಸಲುಮುಂದಾಗಿದೆ ಎಂದರು. ಸಂಘದ ಪ್ರತಿನಿಧಿ ವಿಜಯಲಕ್ಷ್ಮೀ, ಸದಸ್ಯರಾದ ದಾಕ್ಷಾಯಣಿ, ರೇಣುಕಾದೇವಿ, ವೀಣಾ, ಪಾರ್ವತಿ, ರಾಣಿ, ಧನಲಕ್ಷ್ಮೀ, ಶಾರದಾ, ಶಿಲ್ಪಾ, ಗೀತಾ ಇತರರಿದ್ದರು.