ಕುಶಾಲನಗರ:
ಕುಶಾಲನಗರ ತಾಲೂಕು ಹೆಬ್ಬಾಲೆ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಸಚೇತನ ಕಾರ್ಯಕ್ರಮದಡಿ ಸೋಮವಾರ ಸಂಕ್ರಾAತಿ ಹಬ್ಬ ಆಚರಿಸಲಾಯಿತು. ಈ ವೇಳೆ ಶಿಕ್ಷಕರು ಮಕ್ಕಳಿಗೆ ಸಂಕ್ರಾAತಿ ಹಬ್ಬದ ಮಹತ್ವ ತಿಳಿಸಿಕೊಟ್ಟರು. ಮಕ್ಕಳು ಸಂಕ್ರಾAತಿ ಹಬ್ಬವನ್ನು ಸಂಭ್ರಮದಿAದ ಆಚರಿಸಿ ಪರಸ್ಪರ ಎಳ್ಳು ಬೆಲ್ಲವನ್ನು ವಿನಿಮಯ ಮಾಡಿಕೊಂಡರು.
ಶಾಲಾ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಾಂಪ್ರದಾಯಿಕವಾಗಿ ಸುಗ್ಗಿ ಹಬ್ಬದ ಸಲಕರಣೆಗಳನ್ನು ಇಟ್ಟು ಅಭಿನಯ ಗೀತೆಯೊಂದಿಗೆ ಮಕ್ಕಳು ಸಂಭ್ರಮಿಸಿದರು. ನಂತರ ಎಲ್ಲರೂ ಸೇರಿ ಶಾಲಾ ಅವರಣದ ಹೊರಾಂಗಣದಲ್ಲಿ ಸಹ ಪಂಕ್ತಿ ಭೋಜನ ಮಾಡಿದರು.
ಶಾಲಾ ಮುಖ್ಯ ಶಿಕ್ಷಕ ಹೆಚ್. ಎಂ. ವೆಂಕಟೇಶ್ ಉಸ್ತುವಾರಿಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಶಿಕ್ಷಕರಾದ ಸಿ.ಎಸ್. ಜಾನಕಿ, ಸಿ.ಎಂ. ಬಬಿತ. ಪುಷ್ಪಾವತಿ. ಕೆ.ಎಸ್. ರಮ್ಯ, ಎಸ್.ಕೆ. ಶಿವಾನಂದ, ಕೀರ್ತನ, ರಂಜನಾ ಅಡುಗೆ ಸಿಬ್ಬಂದಿ ವಿನುತಾ, ಮಂಜುಳಾ ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.