ಜಿಲ್ಲೆ

ಶ್ರೀಗುರುಸಿದ್ಧೇಶ್ವರ ಬ್ಯಾಂಕ್ ಅಧ್ಯಕ್ಷರಾಗಿ ಶಂಕರಣ್ಣ ಮುನವಳ್ಳಿ ಆಯ್ಕೆ

ಹುಬ್ಬಳ್ಳಿ: ಇಲ್ಲಿನ ದಾಜಿಬಾನಪೇಟೆಯ ಶ್ರೀ ಗುರುಸಿದ್ಧೇಶ್ವರ ಕೋ-ಆಪ್ ಬ್ಯಾಂಕ್‌ನಲ್ಲಿ ಸೋಮವಾರ ಆಡಳಿತ ಮಂಡಳಿ ಸಭೆ ಜರುಗಿತು. ಇದೇ ವೇಳೆ ಮುಂದಿನ 5 ವರ್ಷಗಳವರೆಗೆ ಶಂಕರಣ್ಣ ಮುನವಳ್ಳಿ ಅಧ್ಯಕ್ಷರಾಗಿ, ಅರವಿಂದ ಲಿಂಬಿಕಾಯಿ ಉಪಾಧ್ಯಕ್ಷರನ್ನಾಗಿ ಅವಿರೋಧವಾಗಿ ಆಯ್ಕೆ ಮಾಡಲಾಯಿತು. ಬ್ಯಾಂಕ್‌ನ ಪದಾಧಿಕಾರಿಗಳು ಉಪಸ್ಥಿತರಿದ್ದರು ಎಂದು ರಿಟರ್ನಿಂಗ್ ಅಧಿಕಾರಿ ಬಿ.ಬಿ. ನಾಯಕ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.