ಜಿಲ್ಲೆ

ಪಠ್ಯೇತರ ಚಟುವಟಿಕೆ ಅಗತ್ಯ

ಧಾರವಾಡ: ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸುವಿಕೆ ವಿದ್ಯಾರ್ಥಿಗಳಲ್ಲಿ ಆತ್ಮಸ್ಥೆÊರ್ಯವನ್ನು ದ್ವಿಗುಣಗೊಳಿಸುತ್ತದೆ. ರಾಜ್ಯಮಟ್ಟದ ಸಂಕಲ್ಪ ಉತ್ಸವ ವಿದ್ಯಾರ್ಥಿಗಳಲ್ಲಿ ಐಕ್ಯತಾ ಮನೋಭಾವ ಮೂಡಿಸಿ ಸಮಸ್ಯೆಗಳನ್ನು ಎದುರಿಸುವ ಪಾಠ ಕಲಿಸಿದೆ ಎಂದು ಜೆಎಸ್‌ಎಸ್ ಸಂಸ್ಥೆಯ ಕಾರ್ಯದರ್ಶಿ ಡಾ. ಅಜಿತ ಪ್ರಸಾದ ಹೇಳಿದರು.
ನಗರದ ವಿದ್ಯಾಗಿರಿ ಜೆಎಸ್‌ಎಸ್ ಶ್ರೀ ಮಂಜುನಾಥೇಶ್ವರ ಸ್ನಾತಕ ಮತ್ತು ಸ್ನಾತಕೋತ್ತರ ಅಧ್ಯಯನ ಸಂಸ್ಥೆ ಆಯೋಜಿಸಿದ್ದ ರಾಜ್ಯಮಟ್ಟದ ಸಂಕಲ್ಪ- ೨೦೨೩ ಉತ್ಸವದ ವಿವಿಧ ಸ್ಪರ್ಧೆಗಳ ವಿಜೇತರಿಗೆ ಪ್ರಶಸ್ತಿ ವಿತರಿಸಿ ಅವರು ಮಾತನಾಡಿದರು.
ವಾಣಿಶ್ರೀ ಪ್ರಸಾದ ಅತಿಥಿಯಾಗಿ ಪಾಲ್ಗೊಂಡಿದ್ದರು. ಡಾ. ಸೂರಜ್ ಜೈನ್, ಮಹಾವೀರ ಉಪಾಧ್ಯೆ, ಜಿನದತ್ತ ಹಡಗಲಿ, ವಿವೇಕ ಲಕ್ಷೆ÷್ಮÃಶ್ವರ, ಎನ್.ಎಲ್. ಗುಡ್ಡಿನ, ವಿಭಾ ಮುಗಳಿ, ಜ್ಯೋತಿ ಅಕ್ಕಿ, ಮಂಜುನಾಥ ಪೂಜಾರ, ಶ್ರೀಕಾಮತ ರಾಗಿಕಲ್ಲಾಪೂರ, ಇತರರಿದ್ದರು.
ಬೆಳಗಾವಿಯ ಕೆ.ಎಲ್.ಇ ಲಿಂಗರಾಜ ಕಾಲೇಜು ಸಮಗ್ರ ವೀರಾಗ್ರಣಿ ಪ್ರಶಸ್ತಿ ಪಡೆಯಿತು. ತಂಡಕ್ಕೆ ಟ್ರೋಫಿ ಮತ್ತು ೩೦,೦೦೦ ರೂ.ನಗದು ಬಹುಮಾನ ನೀಡಲಾಯಿತು. ದ್ವಿತೀಯ ಸ್ಥಾನ ಪಡೆದ ಕುಮಟಾದ ಡಾ. ಎ.ವಿ. ಬಾಳಿಗಾ ಕಾಲೇಜು ತಂಡಕ್ಕೆ ಟ್ರೋಫಿ ಮತ್ತು ೧೫,೦೦೦ ರೂ. ನಗದು, ತೃತೀಯ ಸ್ಥಾನ ಪಡೆದ ಹುಬ್ಬಳ್ಳಿಯ ಕೆ.ಎಲ್.ಇ ಜೆ.ಜಿ. ಕಾಮರ್ಸ್ ಕಾಲೇಜು ತಂಡಕ್ಕೆ ಟ್ರೋಫಿ, ೫,೦೦೦ ರೂ.ನಗದು ಬಹುಮಾನ ನೀಡಲಾಯಿತು.