ಜಿಲ್ಲೆ

ಸಂಕಲ್ಪ ೨೦೨೩ ಲೋಗೋ ಅನಾವರಣ

ಮಡಿಕೇರಿ: ಮಡಿಕೇರಿಯ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜಿನಲ್ಲಿ ವಾಣಿಜ್ಯ ಮತ್ತು ವ್ಯವಹಾರ ಆಡಳಿತ ವಿಭಾಗದ ವತಿಯಿಂದ ನಡೆಯುವ ಸಂಕಲ್ಪ ೨೦೨೩ ಕಲೋತ್ಸವದ ಲೋಗೋ ಅನಾವರಣ ಕಾರ್ಯಕ್ರಮ ಜರುಗಿತು.


ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜಿನ ಪ್ರಾಂಶುಪಾಲರಾದ ಮೇಜರ್ ಪ್ರೊಫೆಸರ್ ಬಿ.ರಾಘವ್ ಮತ್ತು ವಿಭಾಗ ಮುಖ್ಯಸ್ಥರಾದ ಡಾಕ್ಟರ್ ಕೆ.ಶೈಲಶ್ರೀರವರು ಲೋಗೋವನ್ನು ಉದ್ಘಾಟಿಸಿದರು.

ಕಾಲೇಜ್ ಫೆಸ್ಟ್ ಸಂಕಲ್ಪ ೨೦೨೩ರ ಲೋಗೋ ಅನಾವರಣದ ಸಂದರ್ಭದಲ್ಲಿ ವಾಣಿಜ್ಯ ಮತ್ತು ವ್ಯವಹಾರ ಆಡಳಿತ ವಿಭಾಗದ ಎಲ್ಲಾ ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.