ಜಿಲ್ಲೆ

ಸಂಜೀವಿನಿ ಪ್ರಶಸ್ತಿ ಹಾಗೂ ಸಂಜೀವಿ ಶತಮಾನೋತ್ಸವ ಪ್ರಶಸ್ತಿ ಪ್ರದಾನ

Mangaluru - Hariprasad Rai



ಮಂಗಳೂರು : ಸಾರ್ಥಕ ಬದುಕಿನ ಆದರ್ಶದ ಪರಂಪರೆಯನ್ನು ಕಟ್ಟಿಕೊಟ್ಟ ಹಾಗೂ ಮಾನವೀಯ ಮೌಲ್ಯಗಳನ್ನು ಎತ್ತಿ ಹಿಡಿದ
ಹಿರಿಯರ ಸ್ಮರಣೆಯಿಂದ ಸ್ವಸ್ಥ ಸಮಾಜದ ನಿರ್ಮಾಣ ಸಾಧ್ಯ .ಮುಂದಿನ ಪೀಳಿಗೆಗೆ ಇದು ಪ್ರೇರಣೆಯಾಗಲಿದೆ ಎಂದು ನಿವೃತ್ತ ಶಿಕ್ಷಕಿ ಕೆ.ಎ.ರೋಹಿಣಿ ಹೇಳಿದರು.
ನಗರದ ಉರ್ವಸ್ಟೋರ್‌ನ ಕರಾವಳಿ ಲೇಖಕಿಯರ ಮತ್ತು ವಾಚಕಿಯರ ಸಂಘದ ಸಭಾಂಗಣ ಸಾಹಿತ್ಯ ಸದನದಲ್ಲಿ ನಡೆದ 4ನೇ
ಸಂಜೀವಿನಿ ದತ್ತಿ ಪ್ರಶಸ್ತಿ ಹಾಗೂ ಸಂಜೀವಿ ಶತಮಾನೋತ್ಸವ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಅವರು ಮುಖ್ಯ ಅತಿಥಿಯಾಗಿ ಮಾತನಾಡಿದರು.
ಕುಟುಂಬಕ್ಕೆ ಸಂಜೀವಿನಿಯಾದ ತಾಯಂದಿರಿಗೆ ನೀಡುವ ಸಂಜೀವಿನಿ ಪ್ರಶಸ್ತಿಯನ್ನು ಕಾಸರಗೋಡು ಜಿಲ್ಲೆಯ ಸೀತಾಂಗೋಳಿಯ ಸುಲೋಚನಾ ಬೆದ್ರಡಿ ಅವರಿಗೆ, ಸಂಜೀವಿಯವರ ಶತಮಾನೋತ್ಸವ ಸಂಭ್ರಮದ ಪ್ರಶಸ್ತಿಯನ್ನು ಯಕ್ಷಗಾನ ಕಲಾವಿದ ಕೆ.ಎಚ್.ದಾಸಪ್ಪ ರೈ ಮತ್ತು ಭತ್ತದ ಬೇಸಾಯದ ಸಾಧಕಿ ಬೊಂಡಂತಿಲದ ಉಮಾವತಿ ಪೂಜಾರಿ ಅವರಿಗೆ ಪ್ರದಾನ ಮಾಡಲಾಯಿತು.
ಆಕಾಶವಾಣಿಯ ನಿವೃತ್ತ ಕಾರ್ಯಕ್ರಮ ನಿರ್ವಾಹಕ ಸದಾನಂದ ಪೆರ್ಲ ಅವರು ಸಂಸ್ಮರಣಾ ಭಾಷಣ ಮಾಡಿದರು. ಹಿರಿಯ ಜಾನಪದ ವಿದ್ವಾಂಸ ಪ್ರೊ.ಕೆ. ಚಿನ್ನಪ್ಪ ಗೌಡ ಮುಖ್ಯ ಅತಿಥಿಯಾಗಿದ್ದರು.
ಕರಾವಳಿ ಲೇಖಕಿಯರ ಮತ್ತು ವಾಚಕಿಯರ ಸಂಘದ ಅಧ್ಯಕ್ಷೆ, ಮಾಜಿ ಶಾಸಕಿ ಶಕುಂತಳಾ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು.
ಪ್ರಶಸ್ತಿಯ ಪ್ರಾಯೋಜಕಿ ರೂಪಕಲಾ ಆಳ್ವ ಸ್ವಾಗತಿಸಿ, ಮೋಲಿ ಮಿರಾಂದಾ ವಂದಿಸಿದರು. ಕವಿತಾ ಪಕ್ಕಳ ಕಾರ್ಯಕ್ರಮ ನಿರೂಪಿಸಿದರು.