ಜಿಲ್ಲೆ

ಸಂಗೀತ ದಣಿವಾರಿಸುವ ಸಂಜೀವಿನಿ

Dharwada - Vikram Nadiger

ವಿಜಯವಾಣಿ ಸುದ್ದಿಜಾಲ ಧಾರವಾಡ
ಸಂಗೀತವು ಮನುಷ್ಯನ ಚಿಂತಿ, ದಣಿವು ಹೋಗಲಾಡಿಸುವ ಸಂಜೀವಿನಿ. ಎಂತಹ ಕಟುಕ ಮನುಷ್ಯನು ಸಂಗೀತಕ್ಕೆ ಸೋಲುತ್ತಾನೆ ಎಂದು ಕೆಸಿಸಿ ಬ್ಯಾಂಕ್ ಮಾಜಿ ಅಧ್ಯಕ್ಷ ಬಾಪುಗೌಡ ಪಾಟೀಲ ಹೇಳಿದರು.
ನಗರದ ಸಂಗೀತ ವರ್ಷಿಣಿ ಕಲಾ ಸಂಸ್ಥೆ ವತಿಯಿಂದ ರಂಗಾಯಣ ಸುವರ್ಣ ಸಾಂಸ್ಕೃತಿಕ ಸಮುಚ್ಛಯದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಸಂಗೀತೋತ್ಸವ ಕಾರ್ಯಕ್ರಮ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸಂಗೀತದಿಂದ ಮನುಷ್ಯನ ಸರ್ವಾಂಗೀಣ ಅಭಿವೃದ್ಧಿ ಆಗುತ್ತದೆ. ಎಂತಹ ಸಮಸ್ಯೆ ಎದುರಾದರೂ ಶಾಂತತೆಯಿಂದ ಬಗೆ ಹರಿಸಿಕೊಳ್ಳುತ್ತಾನೆ. ಸಂಗೀತವೇ ಮನುಷ್ಯನಿಗೆ ಶಕ್ತಿ. ಮನುಷ್ಯ ಅಷ್ಟೇ ಅಲ್ಲ ನಿಸರ್ಗವೂ ಸಂಗೀತಕ್ಕೆ ಸೋಲುತ್ತದೆ. ಪ್ರತಿಯೊಬ್ಬ ಮನುಷ್ಯನು ಕಲೆ, ಕಲಾವಿದರಿ,ೆ ಸಂಗೀತಕ್ಕೆ ಪ್ರೋತ್ಸಾಹ ನೀಡಿ ಕೈಲಾದಷ್ಟು ಆರ್ಥಿಕ ಸಹಾಯ ಮಾಡಬೇಕು ಎಂದರು.
ಕರ್ನಾಟಕ ವಿದ್ಯಾವರ್ಧಕ ಸಂಘದ ಕೋಶಾಧ್ಯಕ್ಷ ಸತೀಶ ತುರಮರಿ ಸಮಾರಂಭ ಉದ್ಘಾಟಿಸಿದರು. ಪ್ರಲ್ಹಾದ, ವೀಣಾ ಪತ್ತಾರ, ಜಯಂತ ಕಡಗೆ, ಮಾರುತಿ ಬಡೆಣ್ಣವರ, ಸಚಿನ ವಾಲಿ, ಇತರರು ಇದ್ದರು. ನಂತರ ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ ಕಲಾವಿದರಿಂದ ಸಂಗೀತೋತ್ಸವ ಜರುಗಿತು.