ಜಿಲ್ಲೆ

ಸಂಜೀವಿನಿ ಒಕ್ಕೂಟ ಅಭಿವೃದ್ಧಿಗೆ ಪೂರಕ

ಇಂದಿರಾ ಎನ್ ಕೆ

ಕೋಟ: ಸಂಜೀವಿನಿ ಒಕ್ಕೂಟ ಮೂಲಕ ಗ್ರಾಮ ಪಂಚಾಯಿತಿ ಅಭಿವೃದ್ಧಿಗೆ ಪೂರಕ ವಾತಾವರಣ ಸೃಷ್ಟಿಸಲಾಗುತ್ತಿದೆ ಎಂದು ಕೋಟ ಪಿಡಿಒ ಸುರೇಶ್ ಬಂಗೇರ ಹೇಳಿದರು.

ಕೋಟ ಗ್ರಾಪಂ ಸಭಾಂಗಣದಲ್ಲಿ ಕೌಶಲಾಭಿವೃದ್ಧಿ ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ಸಂಜೀವಿನಿ-ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಸಂವರ್ಧನ ಸಂಸ್ಥೆ, ಜಿಪಂ ಉಡುಪಿ, ತಾಪಂ ಬ್ರಹ್ಮಾವರ, ಪ್ರಕೃತಿ ಸಂಜೀವಿನಿ ಗ್ರಾಪಂ ಮಟ್ಟದ ಒಕ್ಕೂಟ ಕೋಟ ಗ್ರಾಪಂ ಆಶ್ರಯದಲ್ಲಿ ಮಾದರಿ ಒಕ್ಕೂಟಗಳ ದೂರದೃಷ್ಟಿ ಹಾಗೂ ವ್ಯಾಪಾರ ಅಭಿವೃದ್ಧಿ ಯೋಜನೆ ಕುರಿತು ನಾಲ್ಕು ದಿನಗಳ ತರಬೇತಿ ಕಾರ್ಯಾಗಾರದಲ್ಲಿ ಮಾತನಾಡಿದರು.

ಕೋಟ ಗ್ರಾಪಂ ಅಧ್ಯಕ್ಷೆ ಜ್ಯೋತಿ ಬಿ.ಶೆಟ್ಟಿ ಉದ್ಘಾಟಿಸಿದರು. ಪ್ರಕೃತಿ ಸಂಜೀವಿನಿ ಗ್ರಾಪಂ ಮಟ್ಟದ ಒಕ್ಕೂಟ ಕೋಟ ಅಧ್ಯಕ್ಷೆ ಜ್ಯೋತಿ ಶೇಖರ್, ಬ್ರಹ್ಮಾವರ ವಲಯ ಕ್ಲಸ್ಟರ್ ಮುಖ್ಯಸ್ಥೆ ಸ್ವಾತಿ, ಜಿಲ್ಲಾ ಸಂಪನ್ಮೂಲ ವ್ಯಕ್ತಿ ಆರಿಫ್ ಉನ್ನಿಸ್, ತಾಲೂಕು ಸಂಪನ್ಮೂಲ ವ್ಯಕ್ತಿ ಹೇಮಾ ಜಗನ್ನಾಥ್, ಸಂಜೀವಿನಿ ಒಕ್ಕೂಟ ಪಿಆರ್‌ಐ ರೀತಾ ಸುಧೀಂದ್ರ ಉಪಸ್ಥಿತರಿದ್ದರು. ಒಕ್ಕೂಟದ ಕೃಷಿ ಸಖಿ ಮಮತಾ ಸ್ವಾಗತಿಸಿದರು. ಎಂ.ಬಿ.ಕೆ ಪ್ರೇಮಾ ಆಚಾರ್ ಕಾರ್ಯಕ್ರಮ ನಿರೂಪಿಸಿದರು. ಎಲ್‌ಸಿಆರ್‌ಪಿ ಭಾರತಿ ವಂದಿಸಿದರು.